ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿರೋ ಅರ್ಜುನ್ ಸರ್ಜಾ VS ಶ್ರುತಿ ಹರಿಹರನ್ #MeToo ಕೇಸ್ ಗೆ ಸಂಬಂಧಪಟ್ಟಂತೆ ಇಂದು 2 ಕೋರ್ಟ್ ಗಳಲ್ಲಿ ವಿಚಾರಣೆ ನಡೆಯಲಿದೆ.
ಮೆಯೋಹಾಲ್ ನ 22ನೇ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಅರ್ಜುನ್ ಹಾಕಿರೋ ಮಾನನಷ್ಟಮೊಕದ್ದಮೆ ಅರ್ಜಿ ವಿಚಾರಣೆ ನಡೆಯಲಿದೆ. ಜೊತೆಗೆ ಹೈಕೋರ್ಟ್ ನಲ್ಲಿ ಅರ್ಜುನ್ ಸರ್ಜಾ ಎಫ್ ಐಆರ್ ರದ್ಧತಿ ಕೋರಿ ಸಲ್ಲಿಸಿರೋ ಅರ್ಜಿ ವಿಚಾರಣೆ ನಡೆಯಿತ್ತದೆ,
ಶ್ರುತಿ ಹರಿಹರನ್ ನೀಡಿರೋ ದೂರಿನ ಅನ್ವಯ ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ನಲ್ಲಿ ಅರ್ಜುನ್ ಸರ್ಜಾ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಸರ್ಜಾ ಈ ಎಫ್ ಐ ಆರ್ ರದ್ದುಗೊಳಿಸುವಂತೆ ಹೈಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ಇಂದು ನಡೆಲಿದೆ.
‘ವಿಸ್ಮಯ’ ಸಿನಿಮಾ ಚಿತ್ರೀಕರಣ ಹಾಗೂ ಶೂಟಿಂಗ್ ನ ಬಿಡುವಿನ ವೇಳೆಯಲ್ಲಿ ಅರ್ಜುನ್ ಸರ್ಜಾ ತನ್ನ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ರು ಅಂತ #MeToo ಅಡಿ ಶ್ರುತಿ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ರು.