ರಾಜ್ಯದಲ್ಲಿ 3 ಲೋಕಸಭಾ ಹಾಗೂ 2 ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್ ಗೆ ಇನ್ನೆರಡು ದಿನಗಳು ಮಾತ್ರ ಬಾಕಿ ಇವೆ. ಈ ನಡುವೆ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ಎಲ್. ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
ಸಂಸದ ಡಿ.ಕೆ ಸುರೇಶ್ ಅವ್ರ ಜೊತೆ ಬೆಂಗಳೂರಿನ ಸದಾಶಿವ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಚಂದ್ರಶೇಖರ್ ತಾವು ಚುನಾವಣಾ ಕಣದಿಂದ ಹಿಂದೆ ಸರಿಯೋದಾಗಿ ಹೇಳಿದ್ರು. ಟಿಕೆಟ್ ನೀಡಿದ್ದ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ತಾನು ತನ್ನ ಮಾತೃಪಕ್ಷ ಕಾಂಗ್ರೆಸ್ ಗೆ ಮರಳುವುದಾಗಿಯೂ ತಿಳಿಸಿದ್ರು.
ಮೂಲತಃ ಕಾಂಗ್ರೆಸ್ ನವರೇ ಆದ ಚಂದ್ರಶೇಖರ್, ಬಿಜೆಪಿಯಲ್ಲಿ ನನ್ನನ್ನು ಸರಿಯಾಗಿ ನೋಡ್ಕೊಂಡಿಲ್ಲ. ಇದೆಕ್ಕೆಲ್ಲಾ ಕಾರಣ ಸಿ.ಪಿ ಯೋಗೇಶ್ವರ್. ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡು ಬಿಜೆಪಿ ಬಲಿಪಶು ಮಾಡಿದೆ. ನಂಗೆ ಇದರ ಸಹವಾಸವೇ ಬೇಡ. ನಾನು ಕಾಂಗ್ರೆಸ್ ಗೆ ವಾಪಸ್ಸಾಗ್ತೀನಿ. ನನ್ನ ಆತ್ಮಸ್ಥೈರ್ಯ ಕುಂದದಂತೆ ನೋಡಿಕೊಂಡ ಕಾಂಗ್ರೆಸ್ ನಾಯಕರಿಗೆ ಕೃತಜ್ಞತೆ ಅಂದಿದ್ದಾರೆ. ಅಷ್ಟೇ ಅಲ್ಲದೆ ಮೈತ್ರಿ ಕ್ಯಾಂಡಿಡೇಟ್ ಅನಿತಾ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.