ಟೀಮ್ ಇಂಡಿಯಾದ ಬೌಲಿಂಗ್ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್ ಕೇವಲ 104 ರನ್ ಗಳಿಗೆ ಆಲ್ ಔಟ್ ಆಗಿದೆ.
ತಿರುವನಂತಪುರದ ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ 5ನೇ ಹಾಗೂ ಕೊನೆಯ ಒಡಿಐನಲ್ಲಿ ಟಾಸ್ ವಿನ್ ಆದ ವಿಂಡೀಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರೋ ಭಾರತಕ್ಕೆ ಬಿಗ್ ಟಾರ್ಗೆಟ್ ನೀಡೋ ಉದ್ದೇಶದಿಂದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವಿಂಡೀಸ್ ಆಡಿದ್ದು ಕೇವಲ 31.5 ಓವರ್ ಗಳನ್ನು ಮಾತ್ರ. ಮಾಡಿದ್ದು 104 ರನ್ ಗಳನ್ನಷ್ಟೇ.
ಭಾರತದ ಪರ ರವೀಂದ್ರ ಜಡೇಜ 4, ಜಸ್ಪ್ರೀತ್ ಬೂಮ್ರಾ, ಕೆ. ಖಲೀಲ್ ಅಹಮ್ಮದ್ ತಲಾ 2, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆದ್ರು.