ಸ್ಯಾಂಡಲ್ ವುಡ್ ನಲ್ಲಿ ಸದ್ಯ ಹೆಚ್ಚು ಸದ್ದು ಮಾಡ್ತಿರೋದು ಮೀ ಟೂ. ಈ #MeToo ಅಡಿ ಅನೇಕ ಹೆಸರುಗಳು ಕೇಳಿ ಬಂದಿದ್ರೂ ಹೆಚ್ಚಾಗಿ ಸೌಂಡ್ ಮಾಡ್ತಿರೋದು ಮಾತ್ರ ನಟ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ಅವ್ರ ವಾರ್. ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಯಾವಾಗ ಲೈಂಗಿಕ ಕಿರುಕುಳ ಆರೋಪ ಮಾಡಿದ್ರೋ ಅವತ್ತಿಂದಲೂ ಇದು ಚರ್ಚೆ ಆಗುತ್ತಲೇ ಇದೆ.
ಒಂದಿಷ್ಟು ಮಂದಿ ಶ್ರುತಿ ಪರ, ಇನ್ನೊಂದಿಷ್ಟು ಜನ ಅರ್ಜುನ್ ಪರ ಬ್ಯಾಟಿಂಗ್ ಮಾಡ್ತಿದ್ದಾರೆ. ಕೆಲವರು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಅಂತ ಇಬ್ಬರ ಪರವೂ ಬ್ಯಾಟಿಂಗ್ ನಡೆಸದೆ ನ್ಯೂಟ್ರಲ್ ಆಗಿದ್ದಾರೆ.
ಇದೀಗ ವಿಸ್ಮಯ ಸಿನಿಮಾ ಡೈರೆಕ್ಟರ್ ಅರುಣ್ ವೈದ್ಯನಾಥನ್ ಅವರ ಸರದಿ. ಇವರೀಗ ಪ್ರಕರಣದ ಬಗ್ಗೆ ಮಾತಾಡಿದ್ದಾರೆ. ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಮಾಡಿರೋ ಮೀ ಟೂ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಅರುಣ್ , “ಅರ್ಜುನ್ ಸರ್ಜಾ ಜಂಟಲ್ ಮ್ಯಾನ್. ನಂಗೆ ವಯಸ್ಸಿಗೆ ಬಂದಿರೋ ಹೆಣ್ಣು ಮಗಳಿದ್ದಾಳೆ. ನಾನು ಇಂತಹ ದೃಶ್ಯಗಳಲ್ಲಿ ಅಭಿನಯಿಸಲ್ಲ ಅಂತ ಹೇಳಿದ್ದರು. ವಿಸ್ಮಯ ಶೂಟಿಂಗ್ ಟೈಮ್ ನಲ್ಲಿ ನಾವೆಲ್ಲಾ ಒಂದು ಟೀಮ್ ಆಗಿ ವರ್ಕ್ ಮಾಡಿದ್ವಿ. ಶೂಟಿಂಗ್ ನಂತರ ನಡೆದ ಸಂಭಾಷಣೆಗಳ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಈ ರೀತಿ ಆರೋಪ ಕೇಳಿ ಬಂದಿರೋದು ನಿಜಕ್ಕೂ ಬೇಸರ ತಂದಿದೆ” ಅಂತ ಹೇಳಿದ್ದಾರೆ.