Friday, September 13, 2024

‘ಮಿಲನ’ ಹೀರೋಯಿನ್ನೂ ಸಿಡಿಸಿದ್ರು ಮೀ ಟೂ ಬಾಂಬ್..!

ಸ್ಯಾಂಡಲ್ ವುಡ್ ನಲ್ಲಿ ಮೀ ಟೂ ಕ್ಯಾಂಪೇನ್ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಸದ್ಯಕ್ಕೆ ಇದು ನಿಲ್ಲೋ ಥರ ಕಾಣ್ತಿಲ್ಲ. ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ‘ಮಿಲನ’ ಮತ್ತು ‘ಪೃಥ್ವಿ’ ಸಿನಿಮಾದ ಹೀರೋಯಿನ್ ಪಾರ್ವತಿ ಮೆನನ್ ಅವರ ಸರದಿ.
ಹೌದು, ಮಿಲನ ಹೀರೋಯಿನ್ ಪಾರ್ವತಿ ಮೀ ಟೂ ಆರೋಪ ಮಾಡಿದ್ದಾರೆ. ಮಾಮಿ ಫಿಲ್ಮ್ ಫೆಸ್ಟ್ ನಲ್ಲಿ ಅವರು ಮೀ ಟೂ ಬಾಂಬ್ ಸಿಡಿಸಿದ್ದಾರೆ. ನಾನು ಬಾಲ್ಯದಲ್ಲೇ ಲೈಂಗಿಕ ಕಿರುಕುಳ ಎದುರಿಸಿದ್ದೆ. 17 ವರ್ಷದ ಬಳಿಕ ನಂಗದು ಅರಿವಿಗೆ ಬಂತು. 12 ವರ್ಷಗಳ ಕಾಲ ಆ ಒಂದು ಘಟನೆ ನನ್ನ ಕಾಡಿತ್ತು ಅಂತ ಹೇಳಿದ್ದಾರೆ.

RELATED ARTICLES

Related Articles

TRENDING ARTICLES