Friday, July 19, 2024

ಸಿನಿಮಾ ಆಗ್ತಿದೆ ಮೀ ಟೂ – ಡೈರೆಕ್ಟರ್ ಗುರುಪ್ರಸಾದ್, ಹೀರೋ ಅರ್ಜುನ್ ಸರ್ಜಾ, ಹೀರೋಯಿನ್ ಶ್ರುತಿ ಹರಿಹರನ್..!

ಸದ್ಯ ದೇಶವ್ಯಾಪಿ ಚರ್ಚೆಯಲ್ಲಿರೋ ವಿಷ್ಯ ಅಂದ್ರೆ ಮೀ ಟೂ. ಬಾಲಿವುಡ್, ಟಾಲಿವುಡ್ ಮಾತ್ರವಲ್ಲ, ಸ್ಯಾಂಡಲ್​​ವುಡ್​ಗೂ ಈ ಮೀ ಟೂ ಘಾಟು ಬಡಿದಿದೆ. ಅದ್ರಲ್ಲೂ ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಕೇಸ್ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಪ್ರಕರಣ ಇದೀಗ ಕೋರ್ಟ್ ಅಂಗಳದಲ್ಲಿದೆ.
ಈ ಕೇಸನ್ನೇ ಮುಂದಿಟ್ಕೊಂಡು ಡೈರೆಕ್ಟರ್ ಗುರುಪ್ರಸಾದ್ ಸಿನಿಮಾ ಮಾಡಲು ಹೊರಟಿದ್ದಾರೆ. ನಿನ್ನೆಯಷ್ಟೇ ಮಿ ಟೂ ಆರೋಪದ ಬಗ್ಗೆ ಬಹಿರಂಗವಾಗಿಯೇ ಕಿಡಿಕಾರಿದ್ದ ಡೈರೆಕ್ಟರ್ ಗುರುಪ್ರಸಾದ್ ಇದೇ ಟಾಪಿಕ್ ಇಟ್ಕೊಂಡು ಸಿನಿಮಾ ಮಾಡೋಕೆ ರೆಡಿಯಾಗಿದ್ದಾರೆ. ಈ ವಿಷ್ಯವನ್ನು ಸ್ವತಃ ಅವ್ರೇ ಹೇಳ್ಕೊಂಡಿದ್ದಾರೆ.
ಗುರುಪ್ರಸಾದ್, ಮಿ ಟೂ ಟೈಟಲನ್ನು ರಿಜಿಸ್ಟರ್ ಮಾಡಿಸೋಕೆ ಅಂತ ಫಿಲ್ಮ್ ಚೇಂಬರ್​​ಗೆ ಹೋಗಿದ್ರಂತೆ. ಆದ್ರೆ ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಮೀ ಟೂ’ ಅನ್ನೋ ಟೈಟಲ್ ರಿಜಿಸ್ಟರ್ ಆಗಿದೆಯಂತೆ..! ಈ ವಿಷ್ಯವನ್ನು ಕೂಡ ಗುರುಪ್ರಸಾದ್ ಅವ್ರೇ ಹೇಳಿದ್ದಾರೆ.
ಮೀ ಟೂ ಸಿನಿಮಾದಲ್ಲಿ ಅರ್ಜುನ್ ಸರ್ಜಾ- ಶೃತಿ ಹರಿಹರನ್..?!
ಇನ್ನು ನಿರ್ದೇಶಕ ಗುರುಪ್ರಸಾದ್ ಮಾಡಬೇಕೆಂದಿರೋ ಮೀ ಟೂ ಸಿನಿಮಾದ ಹೀರೋ, ಹೀರೋಯಿನ್ ಯಾರು ಅಂತಾ ಕೇಳಿದ್ರೆ ಆಶ್ಚರ್ಯ ಆಗುತ್ತೆ..! ಗುರುಪ್ರಸಾದ್ ಪ್ರಕಾರ ಸಿನಿಮಾಗೆ ಸೂಕ್ತವಾದ ನಾಯಕ ಅರ್ಜುನ್ ಸರ್ಜಾ, ನಾಯಕಿ ಶ್ರುತಿ ಹರಿಹರನ್ ಅಂತೆ. ಆದ್ರೆ ಇವರಿಬ್ಬರು ಮತ್ತೆ ಸ್ಕ್ರೀನ್ ಶೇರ್ ಮಾಡಿಕೊಳ್ಳೋದು ಕನಸಿನ ಮಾತೇ ಸರಿ ಬಿಡಿ.
ಅರ್ಜುನ್, ಶ್ರುತಿ ಒಪ್ಪದೇ ಇದ್ರೆ, ಈ ಕಥೆಗೆ ಸಂಗೀತ ಭಟ್ ಕೂಡಾ ಸೂಟ್ ಆಗ್ತಾರೆ. ಒಂದು ವೇಳೆ ಅವರು ಒಪ್ಪಿದ್ರೆ ನಾನೇ ಹೀರೋ ಅಂತಲೂ ಗುರುಪ್ರಸಾದ್ ಹೇಳಿದ್ದಾರೆ. ಆದ್ರೆ ಸಂಗೀತ ಭಟ್ ಚಿತ್ರರಂಗ ಸಾಕಂತ ಗುಡ್ ಬೈ ಹೇಳಿದ್ದಾರೆ.
ಒಟ್ನಲ್ಲಿ ಹೀರೋ, ಹೀರೋಯಿನ್​ ಯಾರ್ ಆಗ್ತಾರೋ ಗೊತ್ತಿಲ್ಲ. ಆದ್ರೆ, ಮೀ ಟೂ ಸಿನಿಮಾ ಮಾಡೋ ಸಾಹಸಕ್ಕೆ ಕೈ ಹಾಕಿರೋ ಗುರುಪ್ರಸಾದ್ ಕಥೆ ಹೆಣೆಯೋದ್ರಲ್ಲಿ ಬ್ಯುಸಿಯಾಗಿದ್ದಾರಂತೆ. ಎಲ್ಲಾ ಓಕೆ, ಆದ್ರೆ ಈ ಮೂವಿಯಲ್ಲಿ ನಟಿಸಲು ಗುರುಪ್ರಸಾದ್ ಅಂದುಕೊಂಡಿರೋ ಹೀರೋ, ಹೀರೋಯಿನ್ ಸಿಗ್ತಾರಾ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ.
– ಅರ್ಚನಾ ಗಂಗೊಳ್ಳಿ

RELATED ARTICLES

Related Articles

TRENDING ARTICLES