ಬಾಲಿವುಡ್‌ನ ಬಹುನಿರೀಕ್ಷಿತ ‘ಕೇದಾರನಾಥ್’ ಚಿತ್ರದ ಟೀಸರ್ ನಿನ್ನೆ ರಿಲೀಸ್ ಆಗಿದ್ದು, 20 ಗಂಟೆಗಳಲ್ಲಿಯೇ 7 .5 ಮಿಲಿಯನ್ಸ್ ಮಂದಿ ಇದನ್ನು ವೀಕ್ಷಿಸಿದ್ದಾರೆ. ಸುಶಾಂತ್ ಮತ್ತು ಸಾರಾ ಅಲಿಖಾನ್ ಲೀಡ್ ರೋಲ್ನಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಟೀಸರ್ನಿಂದಲೇ ಸಖತ್ ಸೌಂಡ್ ಮಾಡ್ತಿದೆ.
ನಟ ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿಖಾನ್‌ಗೆ ಇದು ಚೊಚ್ಚಲ ಮೂವಿ. 2013ರಲ್ಲಿ ಉತ್ತರಾಖಂಡ್‌ನಲ್ಲಿ ನಡೆದ ಜಲ ಪ್ರಳಯದ ಒಂದು ಎಳೆಯನ್ನು ಇಟ್ಕೊಂಡು, ಸುಂದರ ಪ್ರೇಮಕಾವ್ಯವನ್ನು ಹೆಣೆಯಲಾಗಿದೆ ಅಂತ ಚಿತ್ರ ತಂಡ ಹೇಳಿದೆ.
ಪ್ರಕೃತಿಯ ವಿಕೋಪದಿಂದ ತಪ್ಪಿಸಿಕೊಳ್ಳಲು ನಡೆಸುವ ಹೋರಾಟವನ್ನು ಟೀಸರ್‌ನಲ್ಲಿ ತೋರಿಸಲಾಗಿದೆ.ಚಿತ್ರ ಡಿಸೆಂಬರ್ 7ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ.