Monday, December 9, 2024

‘‘ಕಾಮುಕ ಗುರುಪ್ರಸಾದ್ ನನ್ನು ಕತ್ತರಿಸ್ತೀನಿ’’ ಅಂದ ಹುಚ್ಚ ವೆಂಕಟ್..!

 

ನಟ ಹುಚ್ಚವೆಂಕಟ್ ಡೈರೆಕ್ಟರ್ ಗುರುಪ್ರಸಾದ್ ವಿರುದ್ಧ ಗರಂ ಆಗಿದ್ದು, ಹೆಣ್ಮಕ್ಕಳಲ್ಲಿ ಕ್ಷಮೆ ಕೇಳದೇ ಇದ್ರೆ ಹಾಫ್ ಮರ್ಡರ್ ಮಾಡ್ತೀನಿ ಅಂತ ಎಚ್ಚರಿಸಿದ್ದಾರೆ. ಮೀಟೂ ಆರೋಪದ ವಿರುದ್ಧ ಮಾತಾಡಿದ್ದ ಗುರುಪ್ರಸಾದ್ ನಟಿಯರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ರು. “ತಮ್ಮ ಫ್ಯಾಮಿಲಿಯಲ್ಲಿ ತಾವು ಪತಿವ್ರತೆಯರು ಅಂತ ಪ್ರೂವ್ ಮಾಡೋಕೆ ಹೊರಟಿದ್ದಾರೆ. ಇವರಿಗೆ ಹೋಲಿಸಿಕೊಂಡ್ರೆ ಸನ್ನಿಲಿಯೋನ್ ಎಷ್ಟೋ ಉತ್ತಮ. ಸನ್ನಿ ಲಿಯೋನ್ ಎಲ್ಲವನ್ನೂ ವ್ಯಾವಹಾರಿಕವಾಗಿ ನೋಡ್ತಾಳೆ. ಇವರು ಮಾಡಿದ್ದನ್ನು ಅನುಭವಿಸ್ತಾರೆ, ನಾನು ಬಾಯಿಬಿಟ್ರೆ ಏನೇನೋ ಆಗುತ್ತೆ” ಅಂತ ಗುರುಪ್ರಸಾದ್ ಹೇಳಿದ್ರು.

ಗುರುಪ್ರಸಾದ್ ಹೇಳಿಕೆಯನ್ನು ವೆಂಕಟ್ ತೀವ್ರವಾಗಿ ಖಂಡಿಸಿದ್ದಾರೆ. ಅಷ್ಟೇ ಅಲ್ಲದೆ ಕ್ಷಮೆ ಕೇಳದಿದ್ದರೆ ಕತ್ತರಿಸ್ತೀನಿ ಅಂತ ಹೇಳುವುದರ ಜೊತೆಗೆ ಗುರುಪ್ರಸಾದ್ ಗೆ ಸಂಸ್ಕಾರದ ಪಾಠ ಮಾಡಿದ್ದಾರೆ.

‘‘ಡೈರೆಕ್ಟರ್ ಗುರು ಪ್ರಸಾದ್​ಗೆ, ಏನಂದಿ ನೀನು..? ಹೆಣ್ಮಕ್ಕಳು ಪತಿವ್ರತೆ ಅಂತ ಪ್ರೂವ್ ಮಾಡೋಕ್ಕೋಸ್ಕರ ಈ ಥರಾ ಮಾಡ್ತಾ ಇದ್ದಾರೆ ಅಂತ ಅಲ್ವಾ..? ನಿಮ್ಮಂಥಾ ಕಚಡ ನನ್ ಮಕ್ಳು. ಕಚಡ ಡೈರೆಕ್ಟರ್ ಗಳಿಂದಲೇ ಕಣೋ, ಇವತ್ತು ಹೆಣ್ಮಕ್ಕಳು ಸಿನಿಮಾ ರಂಗಕ್ಕೆ ಬರೋಕೆ ಭಯ ಪಡ್ತಿರೋದು. ಎಂಥೆಂಥಾ ಟ್ಯಾಲೆಂಟ್ ಗಳಿದ್ದಾರೆ. ಬಂದ್ ತಕ್ಷಣ ಒಂದ್ ಐಟಮ್ ಸಾಂಗ್ ಇಟ್ ಬಿಡ್ತೀರಾ ಅಲ್ವಾ? ಫಸ್ಟ್  ಹೇಳೋದೇ ಅದು, ಐಟಂ ಸಾಂಗ್ ಇರುತ್ತೆ. ಅಡ್ಜೆಸ್ಟ್ ಮಾಡ್ಕೋ ಬೇಕು ಅಂತ. ನಮ್ ಮನೇಲಿ ಹೆಣ್ಮಕ್ಕಳು ಇರ್ತಾರೆ ಗುರುಪ್ರಸಾದ್. ನಿಮ್ ಮಲೇನಿ ಹೆಣ್ಮಕ್ಕಳು ಇದ್ದಾರಾ? ನಿಮ್ ತಾಯಿ ಇದ್ದಾರಾ..? ಇದಾರೆ ತಾನೆ..? ಪ್ರತಿಯೊಬ್ಬರ ಮನೇಲಿ ಹೆಣ್ಮಕ್ಕಳು ಇರ್ತಾರೆ. ಹೆಣ್ಮಕ್ಕಳ ಬಗ್ಗೆ ಮಾತಾಡುವಾಗ ಕೇರ್ ಫುಲ್ ಆಗಿರ್ಬೇಕು. ಹೆಣ್ಮಕ್ಕಳು ಅಂದ್ರೆ ನೀನು ಏನ್ ಅನ್ಕೊಂಡಿದ್ಯಾ? ಬೇಕಾ ಬಿಟ್ಟಿ ಬಿದ್ದಿದ್ದಾರಾ..? ನೀನು ಹೇಗೋ ಮಾತಾಡ್ತೀಯಾ” ಅಂತ ಪ್ರಶ್ನಿಸಿದ್ದಾರೆ ವೆಂಕಟ್.

‘‘ನಿನ್ನ ಸಿನಿಮಾವನ್ನು ನಿನ್ನ ಅಮ್ಮಗೆ ತೋರಿಸಿದ್ಯಾ? ಅವರು ನಿನ್ನ ಸಿನಿಮಾ ನೋಡಿ ಒಳ್ಳೆಯ ಸಿನಿಮಾ ಮಾಡಿದ್ದೀಯ ಅಂತ ಹೇಳಿದ್ರೆ ನಾನು ಅವರ ಕಾಲಿಗೆ ಬೀಳ್ತೀನಿ. ಹೆಣ್ಮಕ್ಕಳಿಗೆ ಪತಿವ್ರತೆ ಅಂತ ಸರ್ಟಿಫಿಕೇಟ್ ಕೊಡೋಕೆ ನೀನ್ಯಾರೋ? ನೀನು ಹೇಳಿರೋ ಆ ಹೆಣ್ಮಕ್ಕಳ ಸಂಸಾರ ಹಾಳಾದ್ರೆ ಹುಚ್ಚವೆಂಕಟ್ ಸೇನೆ ಹುಡುಗರು ನಿನ್ನ ಕತ್ತರಿಸಿ ಹಾಕ್ತಾರೆ ಕಣೋ. ನಾನು ನನ್ನ ತಂದೆಯನ್ನು ನೋಡ್ಕೋಬೇಕು. ಹಾಗಾಗಿ ನಾನು ನಿನ್ನ ಕೊಲೆ ಮಾಡಲ್ಲ, ಹಾಫ್ ಮರ್ಡರ್ ಮಾಡ್ತೀನಿ’’ ಅಂತ ಹೇಳಿದ್ದಾರೆ.

“ಅಮ್ಮಾ ನಿಮ್ಮ ಮಗ ನಿಮಗೆ ಬಿರಿಯಾನಿ ತಂದುಕೊಡಬಹುದು. ಆ ಬಿರಿಯಾನಿ ಹೆಣ್ಮಕ್ಕಳ ಜೀವನ ಹಾಳು ಮಾಡಿ ತಂದ ಬಿರಿಯಾನಿ. ಅವನಿಗೆ ಬುದ್ಧಿ ಹೇಳಿ ಅಮ್ಮಾ” ಅಂತ ಗುರುಪ್ರಸಾದ್ ಅವರ ತಾಯಿಯಲ್ಲಿ ವೆಂಕಟ್​​ ಮನವಿ ಮಾಡಿದ್ದಾರೆ.

‘‘ಕಾಮುಕ ನನ್ ಮಗನೇ ಗುರುಪ್ರಸಾದ್ , ಸಿನಿಮಾಕ್ಕೆ ಬರೋ ಹೆಣ್ಮಕ್ಕಳಿಗೆ ಅರಿಶಿನ, ಕುಂಕುಮ, ತಾಳಿ ಕೊಡ್ತಿಯೇನೋ? ಐಟಂ ಸಾಂಗ್ ಕೊಡ್ತೀಯಾ ಅಲ್ವಾ? ಲೇ ಹುಚ್ಚವೆಂಕಟ್ ಬದುಕಿದ್ದಾನೆ ಕಣೋ ಕತ್ತರಿಸಿ ಹಾಕ್ತೀನಿ ’’ ಅಂತ ಹೇಳಿರೋ ವೆಂಕಟ್, ಗುರುಪ್ರಸಾದ್ ಅಂಥವರನ್ನು ಎನ್ ಕೌಂಟರ್ ಮಾಡಿ ಅಂತ ಪೊಲೀಸರಿಗೆ ಹೇಳಿದ್ದಾರೆ.

 

RELATED ARTICLES

Related Articles

TRENDING ARTICLES