ಡಬಲ್ ಸೆಂಚುರಿ ಸ್ಟಾರ್, ಹಿಟ್ ಮ್ಯಾನ್ ರೋಹಿತ್ ಶರ್ಮಾ ಒಂದೇ ಒಂದು ಮ್ಯಾಚ್ ನಲ್ಲಿ ಮೂರು ವರ್ಲ್ಡ್ ರೆಕಾರ್ಡ್ ಗಳನ್ನು ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ಮುಂಬೈನ ಬೆಬೋರ್ನ್ ಸ್ಟೇಡಿಯಂನಲ್ಲಿ ನಡೆದ 4ನೇ ಒಡಿಐನಲ್ಲಿ ರೋಹಿತ್ ಭರ್ಜರಿ ಸೆಂಚುರಿ ಸಿಡಿಸಿ ಟೀಮ್ ಇಂಡಿಯಾ ಗೆಲ್ಲೋಕೆ ಕಾರಣರಾದ್ರು. ಈ ವಿನ್ನಿಂಗ್ ಇನ್ನಿಂಗ್ಸ್ ಜೊತೆಗೆ ಮೂರು ರೆಕಾರ್ಡ್ ಗಳನ್ನು ತನ್ನ ಹೆಸ್ರಿಗೆ ಹಿಟ್ ಮ್ಯಾನ್ ಬರೆಸಿಕೊಂಡ್ರು.
1) ಸಚಿನ್ ದಾಖಲೆ ಮುರಿದ ಶರ್ಮಾ : ರೋಹಿತ್ ಶರ್ಮಾ ಕ್ರಿಕೆಟ್ ದೇವ್ರು ಸಚಿನ್ ತೆಂಡೂಲ್ಕರ್ ರೆಕಾರ್ಡ್ ಮುರಿದಿದ್ದಾರೆ. ಟೀಮ್ ಇಂಡಿಯಾ ಪರ ಅತಿ ಹೆಚ್ಚು ಸಿಕ್ಸರ್ ಸಿಡಿಸಿದವರ ಪಟ್ಟಿಯಲ್ಲಿ ರೋಹಿತ್ ಸ್ಥಾನ ಪಡೆದಿದ್ದಾರೆ. ಟೀಮ್ ಇಂಡಿಯಾ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಪಟ್ಟಿಯಲ್ಲೀಗ ಶರ್ಮಾಗೆ 2ನೇ ಸ್ಥಾನ. ಮೊದಲ ಸ್ಥಾನದಲ್ಲಿ ಧೋನಿ ಇದ್ದಾರೆ. ಕೂಲ್ ಕ್ಯಾಪ್ಟನ್ ಧೋನಿ 280 ಇನ್ನಿಂಗ್ಸ್ ಗಳಲ್ಲಿ 218 ಸಿಕ್ಸರ್ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ಶರ್ಮಾ 186 ಇನ್ನಿಂಗ್ಸ್ ಗಳಲ್ಲಿ 196 ಸಿಕ್ಸರ್ ಬಾರಿಸಿದ್ದಾರೆ. 425 ಇನ್ನಿಂಗ್ಸ್ ಗಳಿಂದ ಸಚಿನ್ 195 ಸಿಕ್ಸರ್ ಬಾರಿಸಿ 3ನೇ ಹಾಗೂ 300 ಇನ್ನಿಂಗ್ಸ್ ಗಳಿಂದ 190 ಸಿಕ್ಸರ್ ಬಾರಿಸಿರೋ ಸೌರವ್ ಗಂಗೂಲಿ 4ನೇ ಸ್ಥಾನದಲ್ಲಿದ್ದಾರೆ.
2) ವೇಗದ 21ನೇ ಸೆಂಚುರಿ : ಅತಿ ಕಮ್ಮಿ ಇನ್ನಿಂಗ್ಸ್ ಗಳಲ್ಲಿ, ಅಂದ್ರೆ ಅತಿ ವೇಗವಾಗಿ 21 ಸೆಂಚುರಿಸಿ ಸಿಡಿಸಿರೋ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ರೋಹಿತ್ 4ನೇ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ (116 ಇನ್ನಿಂಗ್ಸ್), ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ (138 ಇನ್ನಿಂಗ್ಸ್), ದಕ್ಷಿಣ ಆಫ್ರಿಕಾದ ಎ ಬಿ ಡಿವಿಲಿಯರ್ಸ್ (183 ಇನ್ನಿಂಗ್ಸ್) ನಂತರ 4ನೇ ಸ್ಥಾನವನ್ನು ಶರ್ಮಾ ಪಡೆದಿದ್ದಾರೆ. 186 ಇನ್ನಿಂಗ್ಸ್ ಗಳಿಂದ ಶರ್ಮಾ 21 ಸೆಂಚುರಿ ಬಾರಿಸಿದ್ದಾರೆ.
3) ಹೆಚ್ಚು ಬಾರಿ 150+ ರನ್ ಗಳಿಸಿದ ಬ್ಯಾಟ್ಸ್ ಮನ್ : ಒಡಿಐ ನಲ್ಲಿ ಅತಿ ಹೆಚ್ಚು ಬಾರಿ 150ಕ್ಕಿಂತ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಶರ್ಮಾ ಈಗ ಮೊದಲ ಸ್ಥಾನ ಪಡೆದಿದ್ದಾರೆ. ನಿನ್ನೆ ನಡೆದ ಮ್ಯಾಚ್ ನಲ್ಲಿ ಶರ್ಮಾ 162 ರನ್ ಗಳಿಸಿದ್ದು, ಇವರು 150ರ ಗಡಿ ದಾಟಿದ್ದು ಇದು 7ನೇ ಬಾರಿ. ಭಾರತದ ಸಚಿನ್ ತೆಂಡೂಲ್ಕರ್ ಮತ್ತು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ತಲಾ 5 ಬಾರಿ, ಕ್ಯಾಪ್ಟನ್ ಕೊಹ್ಲಿ ಮತ್ತು ದ. ಆಫ್ರಿಕಾದ ಹಶೀಮ್ ಆಮ್ಲಾ ತಲಾ 4 ಬಾರಿ 150ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ.