#MeToo ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಟಾಪಿಕ್. ಈ ಬಗ್ಗೆ ಡೈರೆಕ್ಟರ್ ಗುರು ಪ್ರಸಾದ್ ಗರಂ ಆಗಿದ್ದಾರೆ. ತಾನೊಬ್ಬ ರಸಿಕ ಅಂತಲೂ ಈ ವೇಳೆ ಹೇಳಿದ್ದಾರೆ..!
ಹೌದು, ಮೀಟೂ ಆರೋಪದ ವಿರುದ್ಧ ಗುರು ಪ್ರಸಾದ್ ಸಿಟ್ಟಾಗಿದ್ದು, ನಟಿಯರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ತಮ್ಮ ಫ್ಯಾಮಿಲಿಯಲ್ಲಿ ತಾವು ಪತಿವ್ರತೆಯರು ಅಂತ ಪ್ರೂವ್ ಮಾಡೋಕೆ ಹೊರಟಿದ್ದಾರೆ. ಇವರಿಗೆ ಹೋಲಿಸಿಕೊಂಡ್ರೆ ಸನ್ನಿಲಿಯೋನ್ ಎಷ್ಟೋ ಉತ್ತಮ. ಸನ್ನಿ ಲಿಯೋನ್ ಎಲ್ಲವನ್ನೂ ವ್ಯಾವಹಾರಿಕವಾಗಿ ನೋಡ್ತಾಳೆ. ಇವರು ಮಾಡಿದ್ದನ್ನು ಅನುಭವಿಸ್ತಾರೆ, ನಾನು ಬಾಯಿಬಿಟ್ರೆ ಏನೇನೋ ಆಗುತ್ತೆ ಅಂತ ಗುರುಪ್ರಸಾದ್ ಹೇಳಿದ್ದಾರೆ.
ಸಂಗೀತಾ ಭಟ್ ಮೀ ಟೂ ಕ್ಯಾಂಪೇನ್ ನಲ್ಲಿ ತನಗೆ ಒಬ್ಬ ನಿರ್ದೇಶಕ ಕಿರುಕುಳ ನೀಡಿದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಗುರು ಪ್ರಸಾದ್, ‘‘ ನನ್ನ ಹೆಸರು ಅವಳು ಹೇಳಿಲ್ಲ. ಆದರೂ ಯಾಕೆ ನನಗೆ ಈ ಪ್ರಶ್ನೆ. ಅವಳು ವಿಷಕನ್ಯೆ.. ಅವಳನ್ನು ನಾನು ಗೆಳತಿ ಅಂತ ಹೇಳ್ತೀನಿ. ಅವಳನ್ನು ತಂಗಿಯಾಗಿ ನೋಡಲ್ಲ ಯಾಕೆ ಅಂದ್ರೆ ನನ್ನ ತಂಗಿಯ ಬೆನ್ನು ನಾನು ಸಿನಿಮಾದಲ್ಲಿ ತೋರಿಸಲ್ಲ. ಅವಳು ಸಿನಿಮಾದಲ್ಲಿ ಬೆನ್ನು ತೋರಿಸಲು ಬಲವಂತ ಮಾಡಿದ್ದಳು. ಇಂಥದ್ದೆಲ್ಲಾ ಬರುತ್ತೆ ಅಂತಲೇ ಅಂಥಾ ಸನ್ನಿವೇಶ ಇದ್ದಾಗ ನನ್ನ ಮನೆಯವರನ್ನು ಶೂಟಿಂಗ್ ಮುಗಿಯವರೆಗೂ ಜೊತೆಯಲ್ಲೇ ಇಟ್ಟುಕೊಂಡಿದ್ದೆ’’ ಅಂದರು.
ನಾನು ಅತ್ಯಂತ ಸುಂದರಿಯರನ್ನ ನೋಡಿದ್ದೇನೆ ಅವರ ಜೊತೆಯಲ್ಲಿ ಮಲಗಿಲ್ಲ. ಆದರೆ ನಾನು ರಸಿಕ.. ಒಂದು ಹೆಣ್ಣಿನ ಸೌಂದರ್ಯ ಸವಿತೀನಿ ಅಂದ್ರೆ ನಾನು ಗಂಡಸು ಮಲಗಿದರೆ ಮಾತ್ರ ಗಂಡಸಲ್ಲ. ಬೀದೀಲಿ ಹೋಗೋ ಒಬ್ಬ ಸುಂದರ ಹುಡುಗಿಯನ್ನ ಕರೆತಂದು ಹೀರೋಯಿನ್ ಮಾಡ್ತೀನಿ ಅಂತ ಹೇಳಿದ್ರು.
ಹಾಗೆಯೇ ಶೃತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ರವರ ಮೀ ಟೂ ಆಪಾದನೆಯ ಬಗ್ಗೆ ಮಾತಾಡಿ, ಮೀ ಟೂ ಅಭಿಯಾನ ಒಳ್ಳೆಯದು. ಯಾರಿಗೆ ಆಗಲಿ ಆ ತರಹದ ಕಿರುಕುಳವಾದಾಗ ಆಗಲೇ ಖಂಡಿಸಬೇಕು. ಅದನ್ನು ಬಿಟ್ಟು ಯಾವಾಗಲೋ ಮಾತಾಡೋದು ತಪ್ಪು. ಎಲ್ಲರೂ ಕೆಟ್ಟವರಲ್ಲ. ಕೆಲವರು ಕುಟುಂಬದಲ್ಲಿ ತಾನು ಪ್ರತಿವ್ರತೆ ಎಂದು ಸಾಬೀತು ಪಡಿಸಿಕೊಳ್ಳಲು ಹಾಗೂ ತನ್ನ ಗಂಡನಿಗೆ ತನಗೆ ಅಂಥಾ ದೊಡ್ಡ ಸ್ಟಾರ್ ಕರೆದಿದ್ದ ಆದರೂ ನಾನು ನಿಂಗೆ ಸಿಕ್ಕಿದ್ದೀನಿ. ಸರಿಯಾಗಿ ನೋಡ್ಕೋ ಅನ್ನೋಕ್ಕಾಗಿ ಹೀಗೆ ಮೀ ಟೂ ಹೆಸರಲ್ಲಿ ಮಾನ ಹರಾಜು ಹಾಕೋ ಕೆಲಸ ಮಾಡ್ತಿದ್ದಾರೆ ಅಂತ ಕಿಡಿಕಾರಿದ್ರು.