ಅಯ್ಯೋಧ್ಯೆ, ಹಿಂದೂ-ಮುಸ್ಲೀಮರ ನಡುವಿನ ಮುನಿಸಿಗೆ ಕಾರಣ ಆಗಿರೋ ಸ್ಥಳ. ಅಷ್ಟೇ ಅಲ್ಲ, ಎಲೆಕ್ಷನ್ ಹತ್ತಿರ ಬರ್ತಿದ್ದಂತೆ ಪೊಲಿಟಿಕಲ್ ಪಾರ್ಟಿಗಳ ಮನಸ್ಸನ್ನು ಸೆಳೆಯೋ ಕೇಂದ್ರಬಿಂದು. ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿಯೇ ಈ ವಿವಾದದ ವಿಷ್ಯ. ದಶಕಗಳಿಂದ ಹಿಂದೂ-ಮುಸ್ಲೀಂರ ನಡುವಿನ ತಿಕ್ಕಾಟಕ್ಕೆ ಮೂಲ ಆಗಿರೋ ಈ ಸಮಸ್ಯೆಗೆ ಕೊನೆ ಹಾಡಲು ಸುಪ್ರೀಂಕೋರ್ಟ್ ಮುಂದಾಗಿದೆ.
ಹೌದು, ರಾಮಜನ್ಮ ಭೂಮಿ- ಬಾಬ್ರಿ ಮಸೀದಿ ಪ್ರದೇಶವನ್ನು 3 ಭಾಗಗಳಾಗಿ ವಿಭಾಗ ಮಾಡಿ ಹಂಚುವ ಬಗ್ಗೆ ಅಲಹಬಾದ್ ಹೈಕೋರ್ಟ್ 2010ರಲ್ಲಿ ತೀರ್ಪೊಂದನ್ನು ಕೊಟ್ಟಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರೋ ಅರ್ಜಿಗಳ ವಿಚಾರಣೆ ಇವತ್ತಿಂದ ಆರಂಭವಾಗ್ತಿದೆ.
2010ರಲ್ಲಿ ಅಲಹಾಬಾದ್ ಹೈಕೋರ್ಟ್ 2.77 ಎಕರೆ ವಿವಾದಿತ ಪ್ರದೇಶವನ್ನು ರಾಮಲಲ್ಲಾ, ಸುನ್ನಿ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಅಖರ ಸಂಘಟನೆಗೆ ಸಮನಾಗಿ ಹಂಚಿಕೆ ಮಾಡಿತ್ತು. ಅದಕ್ಕೂ ಮೊದಲು, 1994 ರಲ್ಲಿ ಮುಸ್ಲೀಂ ಸಮುದಾಯ ನಮಾಜ್ ನಡೆಸಲು ಮಸೀದಿಯೇ ಬೇಕು ಎನ್ನುವ ಅನಿವಾರ್ಯತೆ ಇಲ್ಲ ಅಂತಾ ಹೈಕೋರ್ಟ್ ತೀರ್ಪು ನೀಡಿತ್ತು. ಈ ತೀರ್ಪು ಅಯೋಧ್ಯೆ ವಿವಾದದ ಮೇಲೆ ಪರಿಣಾಮ ಬೀರಿತ್ತು ಅನ್ನೋ ಆರೋಪವಿದೆ. ಇನ್ನೂ ಈ ಸಂಬಂಧ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿದ್ದ ಮೇಲ್ಮನವಿಯಲ್ಲಿ ಅಯೋಧ್ಯೆ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು ಅನ್ನೋ ಬೇಡಿಕೆ ಇಡಲಾಗಿತ್ತು. ಅದರ ವಿಚಾರಣೆ ನಡೆಸಿದ್ದ ಈ ಹಿಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಜಸ್ಟೀಸ್ ಎಸ್. ಅಬ್ದುಲ್ ನಜೀರ್ ರ ತ್ರಿಸದಸ್ಯ ಪೀಠ, ಕಳೆದ ಸೆಪ್ಟೆಂಬರ್ 27 ರಂದು ಈ ಬಗ್ಗೆ ತೀರ್ಪು ಪ್ರಕಟಿಸಿತ್ತು.
ತೀರ್ಪಿನಲ್ಲಿ, 1994ರ ಸುಪ್ರೀಂ ತೀರ್ಪನ್ನ ಪುನರ್ಪರಿಶೀಲಿಸಲು ನಿರಾಕರಿಸಿದ ಪೀಠ, ಸಾಂವಿಧಾನಿಕ ಪೀಠದ ವಿಚಾರಣೆಗೂ ಸಮ್ಮತಿ ನೀಡಲಿಲ್ಲ. ಬದಲಾಗಿ, ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಮೂವರು ಸದಸ್ಯರ ಪೀಠದಿಂದಲೇ ವಿಚಾರಣೆ ನಡೆಯಲಿದೆ ಅಂತ ಸ್ಪಷ್ಟಪಡಿಸಿತ್ತು. ಇದೀಗ ಈ ಸಂಬಂಧ ಇಂದಿನಿಂದ ಸಿಜೆಐ ರಂಜನ್ ಗೊಗೊಯಿ, ಜಸ್ಟೀಸ್ ಸಂಜಯ್ ಕಿಶನ್ ಕೌಲ್, ಜಸ್ಟೀಸ್ ಕೆ.ಎಂ. ಜೋಸೆಫ್ ಒಳಗೊಂಡ ತ್ರಿಸದಸ್ಯ ಪೀಠ ವಿಚಾರಣೆ ನಡೆಸಲಿದೆ
ಅಯೋಧ್ಯೆ ವಿವಾದಕ್ಕೆ ಸುಪ್ರೀಂ ಕೊನೆ ಹಾಡುತ್ತಾ..?
TRENDING ARTICLES