ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ಸೆಂಚುರಿ ಬಲದಿಂದ ಟೀಮ್ ಇಂಡಿಯಾ ವಿಂಡೀಸ್ ಗೆ ಬಿಗ್ ಟಾರ್ಗೆಟ್ ನೀಡುವತ್ತ ಮುನ್ನುಗ್ಗಿದೆ.
ಮುಂಬೈನ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ 4ನೇ ಒಡಿಐನಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಮಾಡುತ್ತಿದೆ.
ಈಗ 40 .4 ಓವರ್ ಕಂಪ್ಲೀಟ್ ಆಗಿದ್ದು, ಭಾರತ 274 ನ್ ಗಳಿಸಿದೆ. ಪೆವಿಲಿಯನ್ ಸೇರಿರೋದು ಇಬ್ಬರು ಮಾತ್ರ. ಓಪನರ್ ಶಿಖರ್ ಧವನ್ 40 ಬಾಲ್ ಗಳಲ್ಲಿ 2 ಸಿಕ್ಸರ್ 4 ಬೌಂಡರಿಗಳಿಂದ 38 ರನ್ ಗಳಿಸಿ ಪೆವಿಲಿಯನ್ ಸೇರಿದ್ರು. ಕಳೆದ ಮೂರೂ ಮ್ಯಾಚ್ ಗಳಲ್ಲೂ ಸೆಂಚುರಿ ಬಾರಿಸಿದ್ದ ಕ್ಯಾಪ್ಟನ್ ಕೊಹ್ಲಿ ಇವತ್ತು ಕೇವಲ 17 ರನ್ ಗಳನ್ನಷ್ಟೇ ಮಾಡಿ ಪೆವಿಲಿಯನ್ ಸೇರಿದ್ರು.
ಕ್ಯಾಪ್ಟನ್ ಕೊಹ್ಲಿ ಔಟಾಗಿದ್ದರೂ ರನ್ ಗಳಿಕೆಗೆ ಯಾವ್ದೇ ಕೊರತೆ ಇಲ್ಲದಂತೆ ಓಪನರ್ ರೋಹಿತ್ ಶರ್ಮಾ ನೋಡ್ಕೊಂಡಿದ್ದಾರೆ. ರೋಹಿತ್ ಶರ್ಮಾ 124 ಬಾಲ್ ಗಳಲ್ಲಿ 137 ರನ್ ಗಳಿಸಿ ಆಡ್ತಿದ್ದಾರೆ. ಇವರ ಈ ಇನ್ನಿಂಗ್ಸ್ ನಲ್ಲಿ 2 ಸಿಕ್ಸ್, 15 ಬೌಂಡರಿ ಇದೆ. ಶರ್ಮಾಗೆ ಸಾಥ್ ನೀಡಿರೋ ಅಂಬಟಿ ರಾಯ್ಡು 63 ಬಾಲ್ ಗಳಲ್ಲಿ 74 ರನ್ ಗಳಿಸಿ ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಟಾಸ್ ಗೆದ್ದ ಇಂಡಿಯಾ ಬ್ಯಾಟಿಂಗ್ ಆಯ್ಕೆ
ಟೀಮ್ ಇಂಡಿಯಾದ ಯಾವೊಬ್ಬ ಪ್ಲೇಯರ್ ಕೂಡ ಇಲ್ಲಿ ಒಡಿಐ ಆಡಿಲ್ಲ..!