Saturday, April 27, 2024

ಟೀಮ್ ಇಂಡಿಯಾ ಗೆಲುವಿನ ಟ್ರ್ಯಾಕ್ ಗೆ ಮರಳಿದೆ.

ಮುಂಬೈನ ಬೆಬೋರ್ನ್ ಸ್ಟೇಡಿಯಂನಲ್ಲಿ ನಡೆದ 4 ನೇ ಒಡಿಐನಲ್ಲಿ ಭಾರತ ವೆಸ್ಟ್ ಇಂಡೀಸನ್ನು 224 ರನ್ ಗಳಿಂದ ಸೋಲಿಸಿದೆ. 

ಟಾಸ್ ಗೆದ್ದು ಬ್ಯಾಟಿಂಗ್‌ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ರೋಹಿತ್ ಶರ್ಮಾ( 162) ಮತ್ತು ಅಂಬಟಿ ರಾಯ್ಡು (100) ಸೆಂಚುರಿ ಬಲದಿಂದ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 377 ರನ್ ಗಳಿಸಿತು.
ಟಾರ್ಗೆಟ್ ಬೆನ್ನತ್ತಿದ ವಿಂಡೀಸ್ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ 36.2 ಓವರ್ ಗಳಲ್ಲಿ ಕೇವಲ 153 ರನ್ ಗಳಿಗೆ ಆಲ್ ಔಟ್ ಆಯಿತು. ಇದರೊಂದಿಗೆ ಭಾರತ ಗೆಲುವಿನ ಕೇಕೆ ಹಾಕಿತು. ವಿಂಡೀಸ್ ಪರ ಕ್ಯಾಪ್ಟನ್ ಜೇಸನ್ ಹೋಲ್ಡರ್ ಏಕಾಂಗಿ ಹೋರಾಟ ( ಅಜೇಯ 54) ನಡೆಸಿದರು. ಆದ್ರೆ, ಇವರಿಗೆ ಬೇರೆ ಯಾವೊಬ್ಬ ಬ್ಯಾಟ್ಸ್ ಮನ್ ಕೂಡ ಸಾಥ್ ನೀಡದೇ ಇದ್ದಿದ್ರಿಂದ ಗೆಲುವಿನ ಸಮೀಪ ಕೂಡ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ‌
ಟೀಮ್ ಇಂಡಿಯಾದ ಪರ ಖಲೀಲ್ ಅಹಮ್ಮದ್ , ಕುಲ್ದೀಪ್ ಯಾದವ್ ತಲಾ 3, ಭುವನೇಶ್ವರ್ ಕುಮಾರ್ ಮತ್ತು ರವೀಂದ್ರ ಜಡೇಜ ತಲಾ 1 ವಿಕೆಟ್ ಪಡೆದ್ರು.

RELATED ARTICLES

Related Articles

TRENDING ARTICLES