ಟೀಮ್ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ 4ನೇ ಒಡಿಐ ಮ್ಯಾಚ್ ಗೆ ಮುಂಬೈನ ಬ್ರೆಬೋರ್ನ್ ಸ್ಟೇಡಿಯಂ ರೆಡಿಯಾಗಿದೆ. 1-1ರಿಂದ ಸರಣಿ ಸದ್ಯ ಸಮಬಲದಲ್ಲಿದೆ. ಇಂದಿನ ಮ್ಯಾಚ್ ಎರಡೂ ತಂಡಗಳಿಗೂ ತುಂಬಾನೇ ಪ್ರಮುಖವಾಗಿದೆ. ಪುಣೆಯಲ್ಲಿ ನಡೆದ 3ನೇ ಮ್ಯಾಚ್ ನಲ್ಲಿ ಕ್ಯಾಪ್ಟನ್ ಕೊಹ್ಲಿಯ ಸೆಂಚುರಿ ಹೊರತಾಗಿಯೂ ಸೋತಿದ್ದ ಟೀಮ್ ಇಂಡಿಯಾಕ್ಕೆ ಇದು ಪ್ರತಿಷ್ಠೆಯ ಮ್ಯಾಚ್. ಈ ಮ್ಯಾಚ್ ನಲ್ಲಿ ಗೆಲುವಿನ ದಾರಿಗೆ ಬರಲೇ ಬೇಕಾದ ಒತ್ತಡದಲ್ಲಿದೆ ಕೊಹ್ಲಿ ಪಡೆ.
ಫಸ್ಟ್ ಮ್ಯಾಚ್ ನಲ್ಲಿ ಟೀಮ್ ಇಂಡಿಯಾ ಗೆದ್ದಿತ್ತು. 2ನೇ ಮ್ಯಾಚ್ ರೋಚಕ ಟೈನಲ್ಲಿ ಕೊನೆಗೊಂಡಿತ್ತು. 3ನೇ ಮ್ಯಾಚ್ ಅನ್ನು ವೆಸ್ಟ್ ಇಂಡೀಸ್ ಗೆದ್ದಿತ್ತು. ಹೀಗಾಗಿ ಇನ್ನುಳಿದ ಎರಡೂ ಮ್ಯಾಚ್ ಗಳನ್ನು ಗೆದ್ದ ಟೀಮ್ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ.
ಕ್ಯಾಪ್ಟನ್ ವಿರಾಟ್ ಕೊಹ್ಲಿ ಸತತ 3 ಸೆಂಚುರಿಗಳನ್ನು ಬಾರಿಸಿ ರೆಕಾರ್ಡ್ ಮಾಡಿದ್ದಾರೆ. ಇವತ್ತೂ ಕೂಡ ಕೊಹ್ಲಿ ಬ್ಯಾಟ್ ನಿಂದ ರನ್ ಹೊಳೆ ಹರಿಯುವ ನಿರೀಕ್ಷೆ ಕ್ರಿಕೆಟ್ ಅಭಿಮಾನಿಗಳದ್ದು.
ನಾಯಕ ವಿರಾಟ್ ಹೊರತು ಪಡಿಸಿ ಓಪನರ್ ಗಳಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಅವರ ಬ್ಯಾಟ್ ಸದ್ದು ಮಾಡಲೇ ಬೇಕಿದೆ. ಅಂಬಟಿ ರಾಯ್ಡು ನಿರೀಕ್ಷಿತ ಆಟ ಆಡುವ ಅನಿವಾರ್ಯತೆ ಇದೆ. ಯುವ ಬ್ಯಾಟ್ಸ್ ಮನ್ ರಿಷಭ್ ಪಂತ್ ಬ್ಯಾಟ್ ಕಳೆದ 3 ಮ್ಯಾಚ್ ಗಳಲ್ಲಿ ಹೇಳಿಕೊಳ್ಳುವಂತಹ ಸದ್ದು ಮಾಡಿಲ್ಲ. ಇವತ್ತು ಇವರ ಬದಲು ಕನ್ನಡಿಗ ಕೆ.ಎಲ್ ರಾಹುಲ್ ಗೆ ಮಣೆ ಹಾಕೋ ಸಾಧ್ಯತೆ ಇದೆ. ಅಂತಿಮವಾಗಿ ಇಬ್ಬರಲ್ಲಿ ಯಾರಿಗೆ ಮಣೆ ಹಾಕ್ತಾರೆ ಕಾದುನೋಡ್ಬೇಕು. ಮಹೇಂದ್ರ ಸಿಂಗ್ ಧೋನಿ ಫಾರ್ಮ್ ಗೆ ಮರಳಿ ಟೀಕೆ ಮಾಡೋರ ಬಾಯಿ ಮುಚ್ಚಿಸ್ತಾರಾ ನೋಡ್ಬೇಕು.
ಇನ್ನುಳಿದಂತೆ ಪ್ಲೇಯಿಂಗ್ 11 ರಲ್ಲಿ ಕೇದಾರ್ ಜಾಧವ್, ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ ಆಡೋ ಸಾಧ್ಯತೆ ಇದೆ.