ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮತ್ತು ಅಂಬಟಿ ರಾಯ್ಡು ಅವರ ಶತಕದ ನೆರವಿನಿಂದ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಗೆ 378 ರನ್ ಗುರಿ ನೀಡಿದೆ.
ಮುಂಬೈನ ಬೆಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ 4ನೇ ಒಡಿಐನಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ಗಳನ್ನು ಕಳ್ಕೊಂಡು 377 ರನ್ ಗಳಿಸಿದೆ.
ರೋಹಿತ್ ಶರ್ಮಾ 137 ಬಾಲ್ ಗಳಲ್ಲಿ 4 ಸಿಕ್ಸರ್ ಹಾಗೂ 20 ಬೌಂಡರಿ ಸಮೇತ 162 ರನ್ ಗಳಿಸಿದ್ರು. ಇದು ರೋಹಿತ್ ಅವರ 21ನೇ ಒಡಿಐ ಸೆಂಚುರಿ. ರೋಹಿತ್ ಗೆ ಸಾಥ್ ನೀಡಿದ ಅಂಬಟಿ ರಾಯ್ಡು 81 ಬಾಲ್ ಗಳಲ್ಲಿ 4 ಸಿಕ್ಸರ್ 8 ಬೌಂಡರಿ ಮೂಲಕ 100 ರನ್ ಗಳ ಕೊಡುಗೆ ನೀಡಿದ್ರು. ಇನ್ನುಳಿದಂತೆ ಶಿಖರ್ ಧವನ್ 38, ಕ್ಯಾಪ್ಟನ್ ಕೊಹ್ಲಿ 16, ಎಂ.ಎಸ್ ಧೋನಿ 23, ಕೇದರ್ ಜಾಧವ್ ಅಜೇಯ 16, ಜಡೇಜ ಅಜೇಯ 7 ರನ್ ಗಳಿಸಿದ್ರು.
ವಿಂಡೀಸ್ ಪರ ಕೆಮರ್ ರೋಚ್ 2, ಆಶ್ಲೆ ನರ್ಸ್, ಕೆ. ಪಾಲ್ ತಲಾ 1 ವಿಕೆಟ್ ಪಡೆದ್ರು.