Friday, September 20, 2024

ಅಯೋಧ್ಯೆ ಬಗ್ಗೆ ಇಂದು ಯಾವ್ದೇ ನಿರ್ಧಾರ ತೆಗೆದುಕೊಳ್ಳದ ಸುಪ್ರೀಂ..!

ರಾಮಜನ್ಮ ಭೂಮಿ- ಬಾಬ್ರಿ ಮಸೀದಿ ವಿವಾದದ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಜನವರಿಗೆ ಮುಂದೂಡಿದೆ.
‘ರಾಮಜನ್ಮ ಭೂಮಿ- ಬಾಬ್ರಿ ಮಸೀದಿ ಪ್ರದೇಶವನ್ನು 3 ಭಾಗಗಳಾಗಿ ವಿಭಾಗ ಮಾಡಿ ಹಂಚುವ ಬಗ್ಗೆ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ತೀರ್ಪೊಂದನ್ನು ಕೊಟ್ಟಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರೋ ಅರ್ಜಿಗಳ ವಿಚಾರಣೆಯನ್ನು ತುರ್ತಾಗಿ ನಡೆಸಬೇಕು ಅಂತ ಕೇಂದ್ರ ಸರ್ಕಾರ ಮನವಿ ಮಾಡಿತ್ತು.

ಅಯೋಧ್ಯೆ ವಿವಾದಕ್ಕೆ ಸುಪ್ರೀಂ ಕೊನೆ ಹಾಡುತ್ತಾ..?

ಇವತ್ತು ಸಿಜೆಐ ರಂಜನ್ ಗೊಗೊಯಿ, ಜಸ್ಟೀಸ್ ಸಂಜಯ್ ಕಿಶನ್ ಕೌಲ್, ಜಸ್ಟೀಸ್ ಕೆ.ಎಂ. ಜೋಸೆಫ್ ಒಳಗೊಂಡ ತ್ರಿಸದಸ್ಯ ಪೀಠ ವಿಚಾರಣೆ ಕೈಗೆತ್ತಿಕೊಂಡಿತ್ತು. ಆದರೆ, ವಿವಾದದ ವಿಚಾರಣೆ ಬಗ್ಗೆ ಯಾವ್ದೇ ನಿರ್ಧಾರ ತೆಗೆದುಕೊಳ್ಳದ ಪೀಠ ಜನವರಿಗೆ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದೆ. ವಿಚಾರಣೆ ಸ್ವರೂಪವನ್ನು ಕೂಡ ಜನವರಿಯಲ್ಲಿ ನಿರ್ಧಾರ ಮಾಡಲಿದೆ.
2010ರಲ್ಲಿ ಅಲಹಾಬಾದ್ ಹೈಕೋರ್ಟ್ 2.77 ಎಕರೆ ವಿವಾದಿತ ಪ್ರದೇಶವನ್ನು ರಾಮಲಲ್ಲಾ, ಸುನ್ನಿ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಅಖರ ಸಂಘಟನೆಗೆ ಸಮನಾಗಿ ಹಂಚಿಕೆ ಮಾಡಿತ್ತು.

 

RELATED ARTICLES

Related Articles

TRENDING ARTICLES