ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ತನ್ನ ಹೆಂಡ್ತಿ ಅನುಷ್ಕಾ ಶರ್ಮಾಗೋಸ್ಕರ ತಿಂಡಿ-ಊಟ ಬಿಟ್ಟಿದ್ದಾರೆ..! ಅಯ್ಯೋ, ಅನುಷ್ಕಾಗೆ ಏನಾಯ್ತು? ಕೊಹ್ಲಿ ಯಾಕೆ ತಿಂಡಿ-ಊಟ ಬಿಟ್ರು ಅಂತ ಗಾಬರಿ ಆಗೋ ಅಂತಹದ್ದೇನು ಇಲ್ಲ. ಉಪವಾಸ ಇದ್ದಿದ್ದು ಕರ್ವಾ ಚೌತಿ ಪ್ರಯುಕ್ತ.
ವಿರಾಟ್-ಅನುಷ್ಕಾ ನಿನ್ನೆ ಕರ್ವಾ ಚೌತಿಯನ್ನು ಆಚರಿಸಿದ್ರು. ಗಂಡ-ಹೆಂಡ್ತಿ ಇಬ್ರೂ ಕೂಡ ಉಪವಾಸವಿದ್ರು. ಕರ್ವಾ ಚೌತಿ ದಿನ ಹೆಂಡ್ತಿ ತನ್ನ ಗಂಡನಿಗೋಸ್ಕರ ಇಡೀ ದಿನ ಉಪವಾಸ ಇದ್ದು, ರಾತ್ರಿ ಚಂದ್ರನನ್ನು ನೋಡಿ ಬಳಿಕ ಉಪವಾಸ ಕೊನೆಗೊಳಿಸೋದು ಸಂಪ್ರದಾಯ. ಈಗೀಗ ಹೆಂಡ್ತಿಯರು ಮಾತ್ರವಲ್ಲದೆ ಗಂಡಂದಿರೂ ತಮ್ಮ ಪತ್ನಿಗಾಗಿ ಈ ದಿನ ಉಪವಾಸ ಇರ್ತಾರೆ. ಅಂತೆಯೇ ವಿರಾಟ್ ಕೂಡ ಉಪವಾಸವಿದ್ರು.
ಪತ್ನಿ ಅನುಷ್ಕಾ ಜೊತೆಗಿರೋ ಫೋಟೋವನ್ನು ಇನ್ಸ್ ಟಾಗ್ರಾಮ್ ನಲ್ಲಿ ಶೇರ್ ಮಾಡಿರೋ ವಿರಾಟ್ “ಇವಳೇ ನನ್ನ ಜೀವನ, ನನ್ನ ಜಗತ್ತು” ಅಂತ ಬರ್ಕೊಂಡಿದ್ದಾರೆ. ಅನುಷ್ಕಾ ವಿರಾಟ್ ಬಗ್ಗೆ ”ನನ್ನ ಚಂದ್ರ, ಸೂರ್ಯ, ನಕ್ಷತ್ರ, ನನ್ನ ಎಲ್ಲವೂ” ಅಂತ ಹೇಳ್ಕೊಂಡಿದ್ದಾರೆ.
https://www.instagram.com/p/Bpce2yoh9CG/?taken-by=anushkasharma