ಬಾಲಿವುಡ್ ಸಿನಿಮಾಗಳು ಅಂದ್ರೆ ಸಾಕು, ಜನ ಮುಗಿಬಿದ್ದು ನೋಡ್ತಾರೆ. ಭಾರತದ ಎಲ್ಲಾ ರಾಜ್ಯಗಳಲ್ಲೂ ಹಿಂದಿ ಸಿನಿಮಾಗಳು ಓಡುತ್ತವೆ. ಆದ್ರೆ, ನಮ್ಮ ಭಾರತದ್ದೇ ಆದ ಈ ರಾಜ್ಯದಲ್ಲಿ ಹಿಂದಿ ಸಿನಿಮಾಗಳು ಮಾತ್ರವಲ್ಲ, ಹಿಂದಿಯ ಯಾವ್ದೇ ಪ್ರೋಗ್ರಾಂಗಳಿಗೂ ಅವಕಾಶವಿಲ್ಲ.
ನಿಜಕ್ಕೂ ಆಶ್ಚರ್ಯ ಆಗುತ್ತೆ! ನೀವು ನಂಬ್ತೀರೋ ಬಿಡ್ತಿರೋ ಮಣಿಪುರದಲ್ಲಿ ಕಳೆದ 18 ವರ್ಷಗಳಿಂದ ಹಿಂದಿ ಸಿನಿಮಾಗಳೇ ರಿಲೀಸ್ ಆಗಿಲ್ಲ. ಸಿನಿಮಾಗಳ ಕಥೆ ಬಿಡಿ, ಹಿಂದಿಯ ಎಲ್ಲಾ ಪ್ರೋಗ್ರಾಂಗಳು ಕೂಡ ಇಲ್ಲಿ ಬ್ಯಾನ್!
ನಿಮ್ಗೆ ಗೊತ್ತೇ ಇದೆ, ಮಣಿಪುರ ಅತೀ ಹೆಚ್ಚು ವಿದ್ಯಾವಂತರನ್ನು ಹೊಂದಿರೋ ರಾಜ್ಯ.ಕಳೆದ 18 ವರ್ಷಗಳಿಂದ ಪ್ರತ್ಯೇಕ ದೇಶ ಬೇಕು ಅಂತ ಹೋರಾಟ ಮಾಡ್ತಿದ್ದಾರೆ. ಇಲ್ಲಿ ಹಿಂದಿ ಅಂದ್ರೆ ಅದ್ಯಾಕೋ ಆಗುವುದೇ ಇಲ್ಲ!
ಬೇರೆಯವರ ಸಿನಿಮಾ ಬಿಡಿ, ತಮ್ಮದೇ ರಾಜ್ಯದವರಾದ ಮೇರಿಕೋಮ್ ಅವರ ಸಿನಿಮಾ ರಿಲೀಸ್ ಗೂ ಇಲ್ಲಿ ಅವಕಾಶ ಕೊಡ್ಲಿಲ್ಲ.
ಮಣಿಪುರದಲ್ಲಿ ದೊಡ್ಡ ಮಟ್ಟಿನ ಗುಂಪು ಘರ್ಷಣೆ ಇದೆ. ಇಲ್ಲಿಯಷ್ಟು ಗುಂಪುಗಾರಿಕೆ, ಘರ್ಷಣೆ ದೇಶದ ಯಾವ ರಾಜ್ಯದಲ್ಲೂ ಇಲ್ಲ.ಇದೇ ಕಾರಣಕ್ಕೆ ಎಷ್ಟೋ ಜನ ಬೆಂಗಳೂರು, ಮುಂಬೈ ಸೇರಿದಂತೆ ಬೇರೆ ಬೇರೆ ಕಡೆಗಳಿಗೆ ವಲಸೆ ಬರ್ತಿದ್ದಾರೆ.
ಹೀಗೆ ಪ್ರತ್ಯೇಕ ದೇಶದ ಕೂಗು, ಗುಂಪು ವೈಮನಸ್ಸಿನ, ಸಂಸ್ಕೃತಿ ಹಾಳಾಗುತ್ತೆ ಎಂಬ ಕಾರಣಗಳಿಂದ ಇಲ್ಲಿ ಹಿಂದಿ ಸಿನಿಮಾ, ಕಾರ್ಯಕ್ರಮಗಳನ್ನು ಬ್ಯಾನ್ ಮಾಡಿದ್ದಾರೆ.