ಗಣರಾಜ್ಯೋತ್ಸವಕ್ಕೆ ಚೀಫ್ ಗೆಸ್ಟ್ ಆಗಿ ಬರ್ಬೇಕು ಅಂತ ಭಾರತ ನೀಡಿದ್ದ ಆಹ್ವಾನವನ್ನು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರಂತ ವರದಿ ಆಗಿದೆ.
ಭಾರತಕ್ಕೆ ಬರಲು ಟ್ರಂಪ್ ಗೆ ಇನ್ವೈಟ್ ಮಾಡಲಾಗಿದೆ ಅನ್ನೋದನ್ನು ಈ ಹಿಂದೆ ವೈಟ್ ಹೌಸ್ ಪತ್ರಿಕಾ ಸೆಕ್ರೆಟ್ರಿ ಸಾರಾ ಸ್ಯಾಂಡರ್ಸ್ ದೃಢಪಡಿಸಿದ್ರು. ಆದ್ರೆ, ಈ ಬಗ್ಗೆ ಇನ್ನೂ ಯಾವ್ದೇ ರೀತಿಯ ಡಿಸಿಷನ್ ತಗೊಂಡಿಲ್ಲ ಅಂತ ಹೇಳಿದ್ರು. ಈಗ ಡೊನಾಲ್ಡ್ ಟ್ರಂಪ್ ಆಹ್ವಾನವನ್ನು ತಿರಸ್ಕರಿಸಿದ್ದಾರೆ ಅಂತ ತಿಳಿದುಬಂದಿದ್ದು, ವಿದೇಶಾಂಗ ಸಚಿವಾಲಯ ಈ ಬಗ್ಗೆ ಇನ್ನೂ ಏನು ಹೇಳಿಲ್ಲ.
ಒಂದು ವೇಳೆ ಟ್ರಂಪ್ ಭಾರತದ ಆಹ್ವಾವನ್ನು ಕಡೆಗಾಣಿಸಿದ್ದೇ ಆದಲ್ಲಿ ಎರಡು ದೇಶಗಳ ನಡುವಿನ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಅಂತೂ ಬೀಳುತ್ತೆ. ರಷ್ಯಾದೊಂದಿಗೆ ಭಾರತ S-400 ಕ್ಷಿಪಣಿ ಒಪ್ಪಂದಕ್ಕೆ ಇತ್ತೀಚೆಗೆ ಸಹಿ ಹಾಕಿತ್ತು. ಇದು ಅಮೆರಿಕಾಕ್ಕೆ ಇಷ್ಟ ಇರ್ಲಿಲ್ಲ. ಅಷ್ಟೇ ಅಲ್ದೆ ಇರಾನ್ ನಿಂದ ಭಾರತ ಕಚ್ಚಾ ತೈಲ ಆಮದು ಮಾಡಿಕೊಳ್ತಾ ಇರೋದಕ್ಕೂ ಅಮೆರಿಕಾದ ವಿರೋಧವಿದೆ. ಇದೇ ಕಾರಣಕ್ಕೆ ಭಾರತದ ಆಹ್ವಾನವನ್ನು ಅಮೆರಿಕಾ ತಿರಸ್ಕರಿಸಿದೆ ಅಂತ ಹೇಳಲಾಗ್ತಿದೆ.