ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಫ್ಯಾಮಿಲಿ ಫೈಟ್ ಬೀದಿಗೆ ಬಂದಿದ್ದು, ಸಧ್ಯ ಬಗೆಹರಿಯೋ ಸೂಚನೆ ಕಂಡು ಬಂದಿಲ್ಲ. ಈ ಗಲಾಟೆಗೆ ಬ್ರೇಕ್ ಹಾಕಲು ದಕ್ಷಿಣ ವಲಯ ಡಿಸಿಪಿ ಅಣ್ಣಾಮಲೈ ಖಡಕ್ ವಾರ್ನಿಂಗ್ ಮಾಡಿದ್ದಾರೆ ಅಂತ ತಿಳಿದುಬಂದಿದೆ.
ದುನಿಯಾ ವಿಜಯ್ ಕುಟುಂಬ ಸಮಾಜದ ಶಾಂತಿ ಮತ್ತು ಸ್ವಾಸ್ಥ್ಯಕ್ಕೆ ಧಕ್ಕೆ ತರ್ತಿದ್ದು, ಇದನ್ನು ನಿಲ್ಲಿಸಬೇಕು. ಇಲ್ದೆ ಇದ್ರೆ ಕಾನೂನು ಕ್ರಮ ಜರುಗಿಸಬೇಕಾಗುತ್ತೆ ಅಂತ ಅಣ್ಣಾಮಲೈ ಹೇಳಿದ್ದಾರಂತೆ.
ಯಾವ್ದೇ ವ್ಯಕ್ತಿ ಅಥವಾ ಗುಂಪಿಂದ ಆಗಲಿ ಮತ್ತೆ ಮತ್ತೆ ಕಾನೂನು ಸುವ್ಯವಸ್ಥೆ, ಶಾಂತಿಗೆ ತೊಂದ್ರೆ ಆಗ್ತಾ ಇದ್ರೆ ಈ ಸಿಆರ್ ಪಿಸಿ 107ರಡಿ ಕೇಸ್ ದಾಖಲಿಸಿಕೊಳ್ಳೋ ಅವಕಾಶ ಇದೆ.
ಅಂತೆಯೇ ಅಣ್ಣಾಮಲೈ ವಾರ್ನಿಂಗ್ ನೀಡಿರೋ ಭಾಗವಾಗಿಯೇ ಗಿರಿನಗರ ಪೊಲೀಸರು ದುನಿಯಾ ವಿಜಯ್, ಅವರ ಪತ್ನಿಯರಾದ ನಾಗರತ್ನ, ಕೀರ್ತಿಗೌಡ, ನಾಗರತ್ನ ಅವ್ರ ಸಹೋದರ ಹಾಗೂ ವಿಜಯ್ ಅವ್ರ ಬಾಡಿಗಾರ್ಡ್ ವಿರುದ್ಧ ಸಿಆರ್ ಪಿಸಿ ಸೆಕ್ಷನ್ 107ರ ಅಡಿಯಲ್ಲಿ ಸುಮೋಟೊ ಕೇಸ್ ದಾಖಲಿಸಿಕೊಂಡಿದ್ದಾರೆ.
ದುನಿಯಾ ವಿಜಯ್ ಫ್ಯಾಮಿಲಿ ಫೈಟ್ ಗೆ ಅಣ್ಣಾಮಲೈ ಬ್ರೇಕ್..!?
TRENDING ARTICLES