ಪ್ರವಾಸಿ ವೆಸ್ಟ್ ಇಂಡೀಸ್ ಭಾರತದ ವಿರುದ್ಧ 43 ರನ್ ಗಳ ಗೆಲುವು ಪಡೆದಿದೆ. ಇದರೊಂದಿಗೆ ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸೆಂಚುರಿ (107) ವ್ಯರ್ಥವಾಗಿದೆ.
ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡಿದ ವಿಂಡೀಸ್ ಶೈ ಹೋಪ್ ಅವರ ಅರ್ಧಶತಕ (95) ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 283 ರನ್ ಗಳಿಸಿತು.
ಟಾರ್ಗೆಟ್ ಬೆನ್ನತ್ತಿದೆ ಟೀಂ ಇಂಡಿಯಾ ಕೇವಲ 240 ರನ್ ಗಳಿಗೆ ಆಲ್ ಔಟ್ ಆಗುವುದರೊಂದಿಗೆ ಸೋಲೊಪ್ಪಿಕೊಂಡಿತು. ಭಾರತದ ಪರ ಕ್ಯಾಪ್ಟನ್ ಕೊಹ್ಲಿ 107 ಹಾಗೂ ಶಿಖರ್ ಧವನ್ 35 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ ಮನ್ ಗಳಿಂದ ಉತ್ತಮ ಆಟ ಮೂಡಿಬರ್ಲಿಲ್ಲ.
5 ಮ್ಯಾಚ್ ಗಳ ಒಡಿಐ ಟೂರ್ನಿ ಇದಾಗಿದ್ದು. ಫಸ್ಟ್ ಮ್ಯಾಚ್ ನಲ್ಲಿ ಇಂಡಿಯಾ ಗೆದ್ದಿತ್ತು. ಸೆಕೆಂಡ್ ಮ್ಯಾಚ್ ಟೈ ನಲ್ಲಿ ಅಂತ್ಯಗೊಂಡಿತ್ತು. ಈ ಮ್ಯಾಚ್ ಅನ್ನು ವಿಂಡೀಸ್ ತನ್ನದಾಗಿಸಿಕೊಂಡಿದೆ. ಇದರೊಂದಿಗೆ ಸರಣಿ 1-1 ರ ಸಮಬಲದಲ್ಲಿದೆ.
ಕ್ಯಾಪ್ಟನ್ ಕೊಹ್ಲಿ ಸತತ ಮೂರು ಮ್ಯಾಚ್ ಗಳಲ್ಲೂ ಶತಕ ಸಿಡಿಸಿ ಮಿಂಚಿದ್ದಾರೆ.