ಅಮ್ಮನಿಗೆ ಹುಷಾರಿಲ್ಲ , ಅಡುಗೆ ಮಾಡು ಅಂತ ಹೇಳಿದ್ದಕ್ಕೆ ಮಗಳು ಸೂಸೈಡ್ ಮಾಡ್ಕೊಂಡ ಘಟನೆ ಬೆಂಗಳೂರಲ್ಲಿ ನಡೆದಿದೆ. ಪರಂಗಿಪಾಳ್ಯದ 15 ವರ್ಷದ ಮೀನಾಕ್ಷಿ ಆತ್ಮಹತ್ಯೆ ಮಾಡಿಕೊಂಡವಳು. ಅಮ್ಮನಿಗೆ ಹುಷಾರಿಲ್ಲ. ಅಡುಗೆ ಮಾಡು ಅಂತ ಮೀನಾಕ್ಷಿಗೆ ಅಪ್ಪ ಹೇಳಿದ್ದಾರೆ. ಆಕೆ ಅಡುಗೆ ಮಾಡದೇ ಇದ್ದಾಗ ಒಂದೆರಡು ಮಾತು ಬೈದಿದ್ದಾರಂತೆ. ಅಷ್ಟಕ್ಕೇ ಮೀನಾಕ್ಷಿ ನೇಣಿಗೆ ಶರಣಾಗಿದ್ದಾಳೆ. ಎಚ್ ಎಸ್ ಆರ್ ಲೇಔಟ್ ನಲ್ಲಿ ಪ್ರಕರಣ ದಾಖಲಾಗಿದೆ.