ನಟಿ ಶ್ರುತಿ ಹರಿಹರನ್ ಗೆ ಮದ್ವೆ ಆಗಿದೆಯಂತೆ..! ಈ ವಿಷ್ಯ ಇಷ್ಟು ದಿನ ಗೊತ್ತೇ ಇರ್ಲಿಲ್ಲ. ಇದೀಗ ಶ್ರುತಿ ಕುಮಾರಿ ಅಲ್ಲ, ಶ್ರೀಮತಿ ಅನ್ನೋ ಸತ್ಯ ಬಯಲಾಗಿದೆ.
ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರೋ ಶ್ರುತಿ ಇವತ್ತು ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಿದ್ದಾರೆ. ಈ ಕಂಪ್ಲೇಂಟ್ ಕಾಪಿಯಿಂದ ಶ್ರುತಿಗೆ ಮದ್ವೆ ಆಗಿದೆ ಅನ್ನೋದು ಗೊತ್ತಾಗಿದೆ. ಶ್ರುತಿ ಮದ್ವೆ ಆಗಿದ್ದ ವಿಷ್ಯವನ್ನು ಇಷ್ಟು ದಿನ ಗೌಪ್ಯವಾಗಿಟ್ಟಿದ್ರು.
ಶ್ರುತಿ ಕಂಪ್ಲೇಂಟ್ ಕೊಡುವಾಗ , ‘ಶ್ರೀಮತಿ ಶ್ರುತಿ ಹರಿಹರನ್ ವೈಫ್ ಆಫ್ ರಾಮ್ ಕುಮಾರ್ ಅಂತ’ ಬರೆದಿದ್ದಾರೆ. ಇದ್ರಿಂದ ಶ್ರುತಿಗೆ ಮದ್ವೆ ಆಗಿದ್ದು, ಅವರ ಪತಿಯ ಹೆಸ್ರು ರಾಮ್ ಕುಮಾರ್ ಅನ್ನೋದು ಬಹಿರಂಗವಾಗಿದೆ. ರಾಮ್ ಕುಮಾರ್ ಮೂಲತಃ ಕೇರಳ ಮೂಲದವ್ರು ಅಂತ ತಿಳಿದುಬಂದಿದೆ.