ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರೋ 3ನೇ ಒಡಿಐನಲ್ಲಿ ಟೀಮ್ ಇಂಡಿಯಾಕ್ಕೆ ಮೊದಲ ಆಘಾತವಾಗಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೀತಾ ಇರೋ ಮ್ಯಾಚ್ ನಲ್ಲಿ ವಿಂಡೀಸ್ ನೀಡಿರೋ ಟಾರ್ಗೆಟ್ ಚೇಸ್ ಮಾಡ್ತಿರೋ ಟೀಮ್ ಇಂಡಿಯಾ ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಅವ್ರ ವಿಕೆಟ್ ಕಳ್ಕೊಂಡಿದೆ.
ಟಾಸ್ ಸೋತು ಫಸ್ಟ್ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಶೈ ಹೋಪ್ ಅವರ ಅಮೋಘ ಅರ್ಧಶತಕ (95) ರನ್ ಗಳ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳ್ಕೊಂಡು 283ರನ್ ಮಾಡಿದೆ. ಭಾರತ ಗುರಿ ಬೆನ್ನತ್ತಿದ್ದು, ರೋಹಿತ್ ಕೇವಲ 8 ರನ್ ಗಳಿಸಿ ಪೆವಿಲಿಯನ್ ಸೇರಿದ್ದಾರೆ. ಶಿಖರ್ ಧವನ್ ಮತ್ತು ಕ್ಯಾಪ್ಟನ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡ್ತಿದ್ದಾರೆ.