Tuesday, June 18, 2024

ಮುಗೀತಾ, ಕೂಲ್ ಕ್ಯಾಪ್ಟನ್ ಟಿ-20 ಭವಿಷ್ಯ…

ಯಸ್…! ನಂಬಲು ಕಷ್ಟವಾದ್ರೂ ನಂಬಲೆಬೇಕಾದ ಅನಿವಾರ್ಯತೆ. ಶುಕ್ರವಾರ ರಾತ್ರಿ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಮ್ಎಸ್ಕೆ ಪ್ರಸಾದ್ ಆಸ್ಟ್ರೇಲಿಯಾ ಹಾಗೂ ವೆಸ್ಟ್ಇಂಡೀಸ್ ವಿರುದ್ಧದ ಟಿ20 ಟೂರ್ನಿಗೆ ಟೀಮ್ಇಂಡಿಯಾವನ್ನು ಪ್ರಕಟಿಸಿದಾಗಿನಿಂದ ಈ ಪ್ರಶ್ನೆ ಕ್ರಿಕೆಟ್ ಫ್ಯಾನ್ಸ್ ತಲೆಯನ್ನು ಕೊರೀತಾ ಇದೆ. ಇದಕ್ಕೆಲ್ಲಾ ಕಾರಣ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತ ಆಯ್ಕೆ ಸಮಿತಿಯ ನಡಿಗೆ.
ಹೌದು..! ವೆಸ್ಟ್ಇಂಡೀಸ್ ವಿರುದ್ಧದ ಟಿ-20 ಸರಣಿಯ ಜೊತೆಗೆ ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಹಾಗೂ ಟ್ವೆಂಟಿ-20 ಸರಣಿಗೂ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಈ ಸರಣಿಗಳಿಂದ ಮಾಜಿ ನಾಯಕ ಹಾಗೂ ಅನುಭವಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಎಮ್ಎಸ್ಡಿಗೆ ಕೋಕ್ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಚುಟುಕು ಮಾದರಿಯ ಪಂದ್ಯಗಳಲ್ಲಿ ಧೋನಿ ನೀಡುತ್ತಿರೋ ಕಳಪೆ ಪ್ರದರ್ಶನವೇ ಇದಕ್ಕೆ ಕಾರಣ ಅನ್ನೋ ಮಾತುಗಳೂ ಕೇಳಿ ಬರ್ತಿವೆ.
2018ರಲ್ಲಿ ನಡೆದ ಟಿ-20 ಮ್ಯಾಚ್ ಗಳಲ್ಲಿ ಧೋನಿ ರೆಕಾರ್ಡ್ ಇಷ್ಟೇ..!
ಮ್ಯಾಚ್ 07
ರನ್ಸ್ 123
50 1
ಬೆಸ್ಟ್ 52*
ಎವರೇಜ್ 41.00

ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಯ್ಕೆ ಸಮಿತಿ ಮುಖ್ಯಸ್ಥ ಎಮ್ಎಸ್ಕೆ ಪ್ರಸಾದ್ ನಾವು ವಿಕೆಟ್ ಕೀಪರ್ ಸ್ಥಾನದಲ್ಲಿ ಬೇರೆ ಆಟಗಾರರನ್ನು ನೋಡ ಬಯಸುತ್ತೇವೆ. ಸದ್ಯ ಧೋನಿಗೆ ವಿಶ್ರಾಂತಿ ನೀಡಲಾಗಿದೆ ಅಂತ ತಿಳಿಸಿದ್ರು..
ಒಟ್ನಲ್ಲಿ ಟಿ-20 ಸರಣಿಗಳಿಂದ ಹೊರಗುಳಿದಿರುವ ಎಮ್ಎಸ್ ಧೋನಿ ಆಸ್ಟ್ರೇಲಿಯಾ ವಿರುದ್ಧದ ಒಡಿಐಗಾದ್ರೂ ಸ್ಥಾನ ಪಡೀತಾರಾ ಅನ್ನೋದು ಸಧ್ಯದ ಕುತೂಹಲ..

RELATED ARTICLES

Related Articles

TRENDING ARTICLES