Thursday, May 30, 2024

ದಾವಣಗೆರೆಯಲ್ಲಿ ಎಲ್ಲಿ ನೋಡಿದ್ರೂ ನೀರು..!

ದಾವಣಗೆರೆಯಲ್ಲಿ ಎಲ್ಲಿ ನೋಡಿದ್ರೂ ನೀರು ನೀರು..! ಹಾಗಂತ ಮಳೆ ಆರ್ಭಟ ಶುರುವಾಗಿಲ್ಲ. ಲಕ್ಷ ಲಕ್ಷ ಲೀಟರ್ ನೀರು ಪೋಲಾಗ್ತಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬಂದಿದ್ರೂ ಅವ್ರು ಈ ನೀರು ಪೋಲಾಗೋದನ್ನು ತಡೆಯೋ ಬಗ್ಗೆ ಗಮನಕೊಟ್ಟಿಲ್ಲ.
ಮಹತ್ವದ ಕೆರೆಗಳನ್ನು ತುಂಬಿಸೋ ಯೋಜನೆಯ ಪೈಪು ಒಡೆದು ನೀರು ಪೋಲಾಗ್ತಿದೆ. 22ಕೆರೆಗಳನ್ನು ತುಂಬಿಸೋ ಯೋಜನೆ ಇದಾಗಿದೆ. ಹರಿಹರದ ತುಂಗಾಭದ್ರಾ ನದಿಯಿಂದ ಪೈಪ್ ಲೈನ್ ಮೂಲಕ ನೀರು ತರಲಾಗುತ್ತಿದೆ.
ಆದ್ರೆ, ಈ ಯೋಜನೆಯ ನೀರು ವ್ಯರ್ಥ ಆಗ್ತಿದೆ . ಹರಿಹರ ಪಟ್ಟಣದ ನಡುವೆ ಬಾತಿ ಗ್ರಾಮದ ಬಳಿ ಪೈಪ್ ಒಡೆದು ನೀರು ಪೋಲಾಗುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.

RELATED ARTICLES

Related Articles

TRENDING ARTICLES