ನಟಿ ಶ್ರುತಿ ಹರಿಹರನ್ ಅವ್ರ ವಿರುದ್ಧ ಅರ್ಜುನ್ ಸರ್ಜಾ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಪಟ್ಟಂತೆ ಕೋರ್ಟ್ ಶ್ರುತಿ ಅವ್ರಿಗೆ ನೋಟಿಸ್ ನೀಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರುತಿ ಅವರ ಪ್ರತಿವಾದವನ್ನು ಕೂಡ ಆಲಿಸಬೇಕಿದೆ ಅಂದಿರೋ ಕೋರ್ಟ್ ಅಕ್ಟೋಬರ್ 29ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಅರ್ಜುನ್ ಸರ್ಜಾ ವಿರುದ್ಧ ಶ್ರುತಿ #MeToo ಮೂಲಕ ಲೈಂಗಿಕ ಕಿರುಕುಳ ಆರೋಪ ಮಾಡಿದ್ರು. ಇದಕ್ಕೆ ಸಂಬಂಧಪಟ್ಟಂತೆ ಅರ್ಜುನ್ , ಶ್ರುತಿ ನನ್ನ ಘನತೆಗೆ ಚ್ಯುತಿ ತಂದಿದ್ದಾರೆ ಅಂತ ಆರೋಪಿಸಿ ಕೋರ್ಟ್ ಮೊರೆ ಹೋಗಿದ್ರು.
ಶ್ರುತಿ ಬಹಿರಂಗವಾಗಿ ಕ್ಷಮೆ ಕೇಳ್ಬೇಕು. ಅಷ್ಟೇ ಅಲ್ದೆ 5ಕೋಟಿ ರೂಗಳ ಪರಿಹಾರ ನೀಡ್ಬೇಕು ಅನ್ನೋದು ಅರ್ಜುನ್ ಸರ್ಜಾ ಅವ್ರ ಆಗ್ರಹ.
ಈ ಸಂಬಂಧ ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ಹಾಜರಾಗಲು ಸೂಚಿಸಿದೆ.
ಶ್ರುತಿ ಹರಿಹರನ್ ಗೆ ಕೋರ್ಟ್ ನೋಟಿಸ್
TRENDING ARTICLES