ನಟಿ ಶ್ರುತಿ ಹರಿಹರನ್ ಮತ್ತು ನಟ ಅರ್ಜುನ್ ಸರ್ಜಾ ನಡುವಿನ #MeToo ವಾರ್ ಕ್ಷಣಕ್ಕೊಂದು ತಿರುವು ಪಡೀತಾ ಇದೆ. ನಿನ್ನೆ ಫಿಲ್ಮ್ ಛೇಂಬರ್ ನಲ್ಲಿ ಶ್ರುತಿ-ಅರ್ಜುನ್ ರ ನಡುವೆ ಸಂಧಾನ ಮಾಡುವಲ್ಲಿ ಚಿತ್ರರಂಗದ ಹಿರಿಯರು ಸೋತಿದ್ದಾರೆ. ಈ ನಡುವೆ ಶ್ರುತಿ ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ಅವ್ರ ವಿರುದ್ಧ ಹೈಗ್ರೌಂಡ್ ಪೊಲೀಸ್ ಸ್ಟೇಷನ್ ನಲ್ಲಿ ಮಿಡ್ ನೈಟ್ ಕಂಪ್ಲೇಂಟ್ ಕೊಟ್ಟಿದ್ದಾರೆ. ಫಿಲ್ಮ್ ಛೇಂಬರ್ ನಲ್ಲಿ ಮೀಟಿಂಗ್ ನಡೆಯುವಾಗ , ಹೊರಗಡೆ ತನ್ನ ಮೇಲೆ ಪ್ರಶಾಂತ್ ಆಧಾರ ರಹಿತ ಆರೋಪ ಮಾಡಿದ್ದಾರೆ. ಹಿಂದೂ ಭಾವನೆಗಳಿಗೆ ದಕ್ಕೆ ತಂದಿದ್ದಾರೆ ಅಂತ ಹೇಳಿದ್ದಾನೆ.ಇದು ನನ್ನನ್ನು ಧರ್ಮದ ವಿರುದ್ಧ ಎತ್ತಿಕಟ್ಟುವ ಯತ್ನ ಅಂತ ಶ್ರುತಿ ಕಂಪ್ಲೇಂಟ್ ನಲ್ಲಿ ತಿಳಿಸಿದ್ದಾರೆ. ಸಂಬಂಧ ಪಡದ ವಿಚಾರಕ್ಕೆ ತಲೆ ಹಾಕಿದ್ದೂ ಅಲ್ಲದೆ ಕೊಲೆಬೆದರಿಕೆ ಒಡ್ಡಿದ್ದಾರೆ. ಏಕವಚನದಲ್ಲಿ ನಿಂದಿಸಿ ಘನತೆಗೆ ಕುತ್ತು ತಂದಿರುವ ಸಂಬರಗಿ ವಿರುದ್ಧ ಕಾನೂನು ಕ್ರಮ ಕೈಗೊಳ್ಬೇಕು ಅಂತ ಶ್ರುತಿ ಕಂಪ್ಲೇಂಟ್ ನಲ್ಲಿ ಕೇಳಿಕೊಂಡಿದ್ದಾರೆ.