Wednesday, May 22, 2024

ಬೆಂಗಳೂರು ಬಿಟ್ಟು ಹೋಗ್ತಿದ್ದಾರೆ ಬಿಗ್ ಬಾಸ್ ಪ್ರಥಮ್..! ಕಾರಣ ಏನಂದ್ರೆ..?

ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಬೆಂಗಳೂರು ಬಿಡ್ತಿದ್ದಾರಂತೆ. ಅಷ್ಟೇ ಅಲ್ಲ ಚಿತ್ರರಂಗಕ್ಕೂ ಗುಡ್ ಬೈ ಹೇಳ್ತಿದ್ದಾರಂತೆ.
ಇದು ಸುಳ್ ಸುದ್ದಿಯಲ್ಲ. ಅಂತೆ-ಕಂತೆ ಪುರಾಣವೂ ಅಲ್ಲ..! ಹೀಗಂತ ಸ್ವತಃ ಪ್ರಥಮ್ ಅವ್ರೇ ಹೇಳ್ಕೆ ಕೊಟ್ಟಿದ್ದಾರೆ.
ನಂಗೆ ಚಿತ್ರರಂಗದ ಮೇಲೆ ಜಿಗುಪ್ಸೆ ಇಲ್ಲ. ಬೆಂಗಳೂರು ಸಾಕು ಅನಿಸ್ತಿದೆ ಅಷ್ಟೇ. ಯಾಕಂದ್ರೆ ಇತ್ತೀಚೆಗೆ ಯಾವ್ದೇ ಸಿನಿಮಾ ಮಾಡಿದ್ರು 1ವಾರ ಕೂಡ ಥಿಯೇಟರ್ ನಲ್ಲಿ ಉಳ್ಕಳಲ್ಲ. ರಿಲೀಸ್ ಆದ ದಿನ ಯೂ ಟ್ಯೂಬ್ ನಲ್ಲಿ ಬರುತ್ತೆ. ವಾರದಲ್ಲಿ 8 ಸಿನಿಮಾ ರಿಲೀಸ್ ಆಗುತ್ತೆ. ಇಂಡಸ್ಟ್ರಿಯಲ್ಲಿದ್ದು ಮಾಡುವಂತಹದ್ದೇನು? ತುಂಬಾ ಆಸೆ ಇಟ್ಕೊಂಡು ಬಂದೆ. ಆದ್ರೆ, ಈಗ ಬೇಡ ಅಂತ ತ್ಯಾಗ ಮಾಡ್ತಿದ್ದೇನೆ. ಆರಾಮಾಗಿ ನಮ್ಮೂರಲ್ಲಿ ತೋಟ ಮಾಡ್ಕೊಂಡು ಇರೋಣ ಅಂತ. ಒಂದಿಷ್ಟು ಕುರಿಗಳನ್ನು ತಗೊಂಡಿದ್ದೀನಿ. ನಮ್ಮ ತೋಟದಲ್ಲಿ ತೆಂಗಿನ ಮರಗಳನ್ನು ಬೆಳೆಸ್ಬೇಕು ಅಂತಿದ್ದೀನಿ‌.

ಬೆಂಗಳೂರು ಸಾಕು. ಒತ್ತಡದ ಯಾಂತ್ರಿಕ ಜೀವನ ಇಲ್ಲಿಯದು. ಇದು ನಂಗೆ ಹಿಂಸೆ ಅನಿಸ್ತಿದೆ. ನಾನು ಈ ಸ್ಪೀಡ್ ಗೆ ಅಡ್ಜೆಸ್ಟ್ ಆಗ್ತಿದ್ದೀನೋ ಇಲ್ಲ ಗೊತ್ತಿಲ್ಲ. ನಂಗೆ ಈ ಬೆಂಗಳೂರು ಜೀವನ ಸಾಕು ಅನಿಸ್ತಿದೆ.ನಮ್ಮೂರಲ್ಲಿ ನಾನೇ ಮಹಾರಾಜನಾಗಿ ಇರೋಣ ಅಂತ.
ಚಿತ್ರರಂಗದ ಕೆಲವು ವಿಚಾರಗಳು ನಂಗೆ ಇಷ್ಟ ಆಗ್ತಿಲ್ಲ. ಎಂಎಲ್ ಎ ರಿಲೀಸ್ ಆಗ್ತಿದೆ‌. ನಟ ಭಯಂಕರ ಮುಗೀತಾ ಬಂದಿದೆ. ಅದೇ‌ ಲಾಸ್ಟ್ ಸಿನಿಮಾ.ಅದಾದ್ಮೇಲೆ ದೇವ್ರಾಣೆಗೂ ನಂಗೆ ಈ ವಾತವರಣ ಆಗಲ್ಲ. ಊರಿಗೆ ಹೋಗೋಕೆ ರೆಡಿಯಾಗಿದ್ದೀನಿ. ಅರ್ಧಕರ್ದ ಲಗೇಜ್ ಶಿಫ್ಟ್ ಮಾಡಿದ್ದೀನಿ ಅಂತ ಹೇಳಿದ್ದಾರೆ.

RELATED ARTICLES

Related Articles

TRENDING ARTICLES