ಲೈಂಗಿಕ ಕಿರುಕುಳ ಆರೋಪ ಎದುರಿಸ್ತಿರೋ ನಟ ಅರ್ಜುನ್ ಸರ್ಜಾ ಪರ ಅಳಿಯ, ನಟ ಚಿರಂಜೀವಿ ಸರ್ಜಾ ಬ್ಯಾಟಿಂಗ್ ಗೆ ಇಳಿದಿದ್ದಾರೆ. ಮಾವನ ಪರ ಟ್ವಿಟರ್ ಅಭಿಯಾನ ಶುರುಮಾಡಿರುವ ಚಿರು, ತನ್ನ ಮಾವನಿಗೆ ಸಪೋರ್ಟ್ ಮಾಡಿ ಅಂತ ತಮ್ಮ ಫ್ಯಾನ್ಸ್ ಅನ್ನು ಟ್ಟಿಟರ್ ನಲ್ಲಿ ಕೇಳ್ಕೊಂಡಿದ್ದಾರೆ. ನಿನ್ನೆ ಅರ್ಜುನ್ -ಶ್ರುತಿ ವಿಚಾರಕ್ಕೆ ಸಂಬಂಧಿಸಿದಂತೆ ಫಿಲ್ಮ್ ಛೇಂಬರ್ ನಲ್ಲಿ ನಡೆದ ವಿಚಾರಣಾ ಸಭೆಯಲ್ಲಿ ‘ಸಂಧಾನ’ ಕೂಡ ವಿಫಲವಾಗಿದ್ದು, ಪ್ರಕರಣ ಕ್ಷಣಕ್ಕೊಂದು ತಿರುವು ಪಡೀತಾ ಇದೆ.