Saturday, July 27, 2024

ಬ್ರಾವೋ ಹೀಗೆ ಮಾಡಿದ್ದು ಸರಿನಾ..?

ಡ್ವೇನ್ ಬ್ರಾವೋ. ವರ್ಲ್ಡ್ ಕ್ರಿಕೆಟ್ ಕಂಡ ಬೆಸ್ಟ್ ಆಲ್ ರೌಂಡರ್. ಇವ್ರು ಒಬ್ಬ ಒಳ್ಳೆಯ ಕ್ರಿಕೆಟರ್ ಮಾತ್ರ ಆಗಿರ್ಲಿಲ್ಲ. ಅತ್ಯುತ್ತಮ ಡಿಜೆ ಕೂಡ ಹೌದು. ಇದು ಯಾರಿಗೂ ಗೊತ್ತಿಲ್ದೆ ಇರೋ ವಿಷ್ಯ ಏನಲ್ಲ.  ಈಗ ಈ ವರ್ಲ್ಡ್ ಫೇಮಸ್ ಆಲ್ ರೌಂಡರ್ ತಮ್ಮ ಅಭಿಮಾನಿಗಳಿಗೆ ಬಿಗ್ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

ವೆಸ್ಟ್ ಇಂಡೀಸ್ ನ ಈ ಕ್ರಿಕೆಟರ್ ಇಂಟರ್ ನ್ಯಾಷನಲ್ ಮ್ಯಾಚ್ ಆಡ್ದೆ 2 ವರ್ಷ ಆಗಿದೆ. ಆದ್ರೂ ಕೂಡ ಬ್ರಾವೋ ಕಮ್ ಬ್ಯಾಕ್ ಮಾಡ್ತಾರೆ ಅನ್ನೋ ಆಸೆ ಅವ್ರ ಫ್ಯಾನ್ಸ್ ಗಿತ್ತು. ಆದ್ರೆ, ಇದೀಗ ಬ್ರಾವೋ ಇಂಟರ್ ನ್ಯಾಷನಲ್ ಕ್ರಿಕೆಟ್ ಗೆ ಗುಡ್  ಬೈ ಹೇಳಿಬಿಟ್ಟಿದ್ದಾರೆ.

2010ರಲ್ಲಿ ಕೊನೆಯ ಟೆಸ್ಟ್ ಮ್ಯಾಚ್ ಆಡಿದ್ದ ಬ್ರಾವೋ, 2014 ರಲ್ಲಿ  ಟೀಮ್ ಇಂಡಿಯಾ ವಿರುದ್ಧ  ಧರ್ಮಶಾಲಾದಲ್ಲಿ ಆಡಿದ್ದ ಮ್ಯಾಚೇ ಕೊನೆಯ ಒಡಿಐ. ಈ ಮ್ಯಾಚ್ ಬಳಿಕ ವಿಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ಪ್ರತಿಭಟಿಸಿ ದೇಶಕ್ಕೆ ಹಿಂತಿರಿಗಿದ್ದ ಇವ್ರು ನಂತ್ರ ಒನ್ ಡೇ ಟೀಮ್ ನಲ್ಲಿ  ಕಾಣ್ಲೇ ಇಲ್ಲ.  2016ರಲ್ಲಿ ಪಾಕಿಸ್ತಾನ ವಿರುದ್ಧ ಅಬುದಾಬಿಯಲ್ಲಿ ಆಡಿದ್ದ ಟಿ20 ಮ್ಯಾಚೇ ಬ್ರಾವೋ ಅವ್ರ ಕೊನೆಯ ಇಂಟರ್  ನ್ಯಾಷನಲ್ ಮ್ಯಾಚ್ ಆಗಿತ್ತು. ನಂತ್ರ ವಿಂಡೀಸ್ ಕ್ರಿಕೆಟ್ ಮಂಡಳಿ ಬ್ರಾವೋ ಅವ್ರನ್ನು ಪರ್ಮನೆಂಟ್ ಆಗಿ ಟೀಮ್ ನಿಂದ ಹೊರಗಿಟ್ಟಿತ್ತು.

ಬರೀ ಫ್ರಾಂಚೈಸಿ ಟೀಮ್ ಗಳ ಕಡೆ ಗಮನ ಹರಿಸುತ್ತಾ ದುಡ್ಡಿನ ಹಿಂದೆ ಬಿದ್ದಿದ್ದ ಬ್ರಾವೋ ವಿಂಡೀಸ್ ಗೆ ಬೇಡವಾಗಿದ್ರು. ಐಪಿಎಲ್, ಬಿಗ್ ಬ್ಯಾಶ್ ಸೇರಿದಂತೆ ಪ್ರೀಮಿಯರ್ ಲೀಗ್ ಗಳಲ್ಲಿ ಬ್ಯುಸಿ ಇರುವ ಬ್ರಾವೋ ಈಗ ನೀವು ವಾಪಸ್ಸು ಕರೆದ್ರೂ ನಾನು ಬರಲ್ಲ ಅಂತ ವಿಂಡೀಸ್ ಕ್ರಿಕೆಟ್ ಮಂಡಳಿಗೆ ಹೇಳಿದ್ದಾರೆ.

2 ಬಾರಿ ಟಿ20 ವರ್ಲ್ಡ್ ಕಪ್ ಗೆದ್ದಿದ್ದ ವೆಸ್ಟ್ ಇಂಡೀಸ್ ಟೀಮ್ ನಲ್ಲಿ ಬ್ರಾವೋ ಇದ್ರು. ಇಂದು ಬ್ರಾವೋ ಇಂಟರ್ ನ್ಯಾಷನಲ್ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಆದ್ರೆ, ಅಭಿಮಾನಿಗಳನ್ನು ಪ್ರೀಮಿಯರ್ ಲೀಗ್ ಗಳಲ್ಲಿ ರಂಜಿಸೋದನ್ನು ಮುಂದುವರೆಸ್ತಾರೆ.

2004ರಲ್ಲಿ ಇಂಟರ್ ನ್ಯಾಷನಲ್  ಕ್ರಿಕೆಟ್​ಗೆ  ಎಂಟ್ರಿಕೊಟ್ಟಿದ್ದ ಬ್ರಾವೋ ಅವ್ರಿಗೆ ಈಗ 35 ವರ್ಷ.  ಈವರೆಗೆ 40 ಟೆಸ್ಟ್,164 ಒಡಿಐ ಹಾಗೂ 66 ಟಿ20 ಮ್ಯಾಚ್ ಗಳನ್ನು ಆಡಿದ್ದಾರೆ.

ಡ್ವೇನ್​ಬ್ರಾವೋ ಅಂತರಾಷ್ಟ್ರೀಯ ಕ್ರಿಕೆಟ್ ಕರಿಯರ್

                   ಪಂದ್ಯ             ರನ್ಸ್              100/50           ವಿಕೆಟ್

ಟೆಸ್ಟ್              40                2200             3/13              86

ಏಕದಿನ           164               2968              2/10              199

ಟಿ20              64                1142               0/4              52

RELATED ARTICLES

Related Articles

TRENDING ARTICLES