Tuesday, June 6, 2023
Powertv Logo

Kannada Kannada English English Hindi Hindi Telugu Telugu Tamil Tamil Malayalam Malayalam

Homeದೇಶ18 ಶಾಸಕರ ಅನರ್ಹತೆ ನಿರ್ಧಾರ ಎತ್ತಿಹಿಡಿದ ಹೈಕೋರ್ಟ್..!

18 ಶಾಸಕರ ಅನರ್ಹತೆ ನಿರ್ಧಾರ ಎತ್ತಿಹಿಡಿದ ಹೈಕೋರ್ಟ್..!

ಎಐಎಡಿಎಂ​ಕೆಯ 18 ಶಾಸಕರನ್ನು ಅನರ್ಹಗೊಳಿಸಿರೋದನ್ನು ಮದ್ರಾಸ್​ ಹೈಕೋರ್ಟ್​ ಎತ್ತಿಹಿಡಿದಿದೆ. ಇದ್ರಿಂದಾಗಿ ಟಿಟಿವಿ ದಿನಕರನ್​ ಗುಂಪಿಗೆ ಭಾರೀ ಹಿನ್ನಡೆ ಆಗಿದೆ. ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದ ದಿನಕರನ್​ ಬಣದ 18 ಶಾಸಕರು ಆಗಸ್ಟ್​ ತಿಂಗಳಲ್ಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಸರ್ಕಾರದ ಬಗ್ಗೆ ತಮ್ಗೆ ವಿಶ್ವಾಸ ಇಲ್ಲ ಅಂತ ಆರೋಪಿಸಿದ್ರು. ಅಷ್ಟೇ ಅಲ್ದೆ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿದ್ರು. ಇದಾದ ಬೆನ್ನಲ್ಲೇ ತಂಗ ತಮಿಳ್​ಸೆಲ್ವ ಸೇರಿ 18 ಬಂಡಾಯ ಶಾಸಕರನ್ನು ಅನರ್ಹಗೊಳಿಸಲಾಗಿತ್ತು. ಅಷ್ಟೇ ಅಲ್ದೆ, ತಮಿಳುನಾಡು ವಿಧಾನಸಭೆ ಪಕ್ಷಾಂತರ ನಿಷೇಧ ನಿಯಮಾವಳಿ ಅನ್ವಯ ಅವರನ್ನು ಅನರ್ಹಗೊಳಿಸಲಾಗಿದೆ ಅಂತ ಸ್ಪಷ್ಟನೆಯನ್ನೂ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಅನರ್ಹ ಶಾಸಕರು ಹೈಕೋರ್ಟ್​​ ಮೆಟ್ಟಿಲೇರಿದ್ರು. ಮೇಲ್ಮನವಿ ವಿಚಾರಣೆ ಮಾಡಿದ ನ್ಯಾ. ಎಂ ಸತ್ಯನಾರಾಯಣ್ ಅವ್ರು ಶಾಸಕರನ್ನು ಅನರ್ಹಗೊಳಿಸಿದ್ದ ತಮಿಳುನಾಡು ಅಸೆಂಬ್ಲಿ ಸ್ಪೀಕರ್ ನಿರ್ಧಾರವನ್ನು ಎತ್ತಿಹಿಡಿದಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments