ಫಿಲ್ಮ್ ಛೇಂಬರ್ ನಲ್ಲಿ ನಡೆದ ಅರ್ಜುನ್- ಶ್ರುತಿ ವಿಚಾರಣೆ ಸಭೆಯಲ್ಲಿ `ಸಂಧಾನ’ ವಿಫಲವಾಗಿದೆ. ಶ್ರುತಿ ನಾನು ಯಾವ್ದೇ ಕಾರಣಕ್ಕೂ ಕ್ಷಮೆ ಕೇಳಲ್ಲ. ನಾಳೆ ಬೆಳಗ್ಗೆ ತನಕ ವ್ಹೇಟ್ ಮಾಡ್ತೀನಿ ಅಂತ ಹೇಳಿದ್ದಾರೆ.
ಶ್ರುತಿ ಅವರಂತೆಯೇ ಅರ್ಜುನ್ ಸರ್ಜಾ ಕೂಡ ಪಟ್ಟು ಸಡಿಸಲಿಲ್ಲ. ಅವ್ರೂ ಕೂಡ ಕಾಂಪ್ರಮೈಸ್ ಇಲ್ವೇ ಇಲ್ಲ ಅಂತ ಹೇಳಿದ್ದಾರೆ.
ನನ್ನ ಮೇಲೆ ಹೊರಿಸಿರೋ ಆರೋಪದಿಂದ ನನ್ನ ಫ್ಯಾಮಿಲಿ ಅಂಡ್ ಫ್ಯಾನ್ಸ್ ಗೆ ನೋವಾಗಿದೆ. ಶ್ರುತಿ ನನ್ನ ತೇಜೋವಧೆ ಪ್ರಯತ್ನಿಸಿದ್ದಾರೆ. ಹಾಗಾಗಿ ಇನ್ನೇನಿದ್ರೂ ನಾನು ಕೋರ್ಟ್ ನಲ್ಲೇ ಮಾತಾಡ್ತೀನಿ. ಅಲ್ಲೇ ಎಲ್ಲಾ ಸತ್ಯಗಳ ಬಯಲಾಗುತ್ತವೆ ಅಂತ ಸಭೆ ಬಳಿಕ ನಡೆದ ಪ್ರೆಸ್ ಮೀಟ್ ನಲ್ಲಿ ಸರ್ಜಾ ಹೇಳಿದ್ದಾರೆ.
‘ಲಾ ಈಸ್ ಕಿಂಗ್’..! ಇದು ಡೈಲಾಗಲ್ಲ. ಮೀ ಟೂ ನಿಜಕ್ಕೂ ವಂಡರ್ ಫುಲ್ ಥಿಂಗ್. ಆದ್ರೆ, ಇದನ್ನು ಮಿಸ್ ಮಾಡಿಕೊಳ್ಳಲಾಗ್ತಿದೆ. ನಾನು ಕೋರ್ಟ್ ನಲ್ಲೇ ಮಾತಾಡ್ತೀನಿ. ನಾನು ತಪ್ಪು ಮಾಡಿದ್ರೆ ನಂಗೆ ಶಿಕ್ಷೆ ಆಗಲಿ ಅಂದಿದ್ದಾರೆ.
ಶ್ರುತಿ ಈ ಕಾರಣಕ್ಕಾಗಿ ಬೆಳಗ್ಗೆಯವರೆಗೆ ವ್ಹೇಟ್ ಮಾಡ್ತಾರಂತೆ..!
ಸರ್ಜಾ-ಶ್ರುತಿ ವಾರ್ ಗೆ ಟ್ವಿಸ್ಟ್ ; ಈ ರಂಪಾಟದ ಹಿಂದಿದೆ ಇಬ್ಬರು ಹಿರಿಯ ನಟರ ಕೈವಾಡ..?