Monday, June 24, 2024

ರೋಮನ್ ರೇನ್ಸ್ WWE ಗೆ ದಿಢೀರ್ ವಿದಾಯ..! ಅಂಡರ್ ಟೇಕರ್​ ನಿಂದ ನಡೆದಿದೆಯಾ ಗಿಮಿಕ್..?

WWE ಅಂತದ್ರೆ ನೆನಪಾಗೋರಲ್ಲಿ ರೋಮನ್ ರೇನ್ಸ್ ಕೂಡ ಒಬ್ರು. ಇವ್ರು ತನ್ನ ಎದುರಾಳಿಗೆ ಸೂಪರ್ ಮ್ಯಾನ್ ಪಂಚ್ ಕೊಟ್ರೆ ಫ್ಯಾನ್ಸ್ ಹುಚ್ಚೆದ್ದು ಕುಣಿತಾರೆ.
ಸದ್ಯ ಯೂನಿವರ್ಸಲ್ ಚಾಂಪಿಯನ್ ಶಿಪ್ ಬೆಲ್ಟ್ ತನ್ನದಾಗಿಸಿಕೊಂಡಿರುವ ಇವರು ರಸ್ಲಿಂಗ್ ಗೆ ದಿಢೀರ್ ವಿದಾಯ ಹೇಳಿದ್ದಾರೆ. ಕಾರಣ ಕೇಳಿದ್ರೆ ನೀವು ಭಾವುಕರಾಗೋದು ಗ್ಯಾರೆಂಟಿ. ಜಗತ್ತಿನ ಮಹಾನ್ ರಸ್ಲರ್ ಗಳನ್ನು ಗೆದ್ದ ಈ ಲೀಡರ್ ನನ್ನು ಕಾಡ್ತಿರೋದು ಕ್ಯಾನ್ಸರ್ ಅನ್ನೋ ಶತ್ರು. ಬಿಳಿರಕ್ತಕಣ ಕ್ಯಾನ್ಸರ್ ರೋಮನ್ ರೇನ್ಸ್ ರನ್ನ ರಸ್ಲಿಂಗ್ ನಿಂದ ದೂರ ಮಾಡ್ತಿದೆ.


ಹಾಗಾಗಿ ನಿನ್ನೆ ದಿನ ಅಭಿಮಾನಿಗಳನ್ನು ಕುರಿತು ಮಾತಾಡಿದ ರೋಮನ್ ರೇನ್ಸ್, ನಾನಿನ್ನು ರಸ್ಲಿಂಗ್ ಗೆ ವಿದಾಯ ಹೇಳ್ತಿದ್ದೇನೆ. ನನ್ನನ್ನು ಇನ್ನಿಲ್ಲದಂತೆ ಕಾಡ್ತಿರೋ ಕ್ಯಾನ್ಸರ್ ನನ್ನು ಸೋಲಿಸಿ ಮತ್ತೆ ಬಂದೇ ಬರ್ತೀನಿ ಅಂತ ಹೇಳಿ ಸದ್ಯಕ್ಕೆ ರಸ್ಲಿಂಗ್ ಗೆ ಗುಡ್ ಬೈ ಹೇಳಿದ್ರು.
ಆದ್ರೆ, ಇದು ಗೇಮ್ ಪ್ಲಾನ್ ಇರಬಹುದಾ ಅನ್ನೋದು ಒಂದಿಷ್ಟು ಜನರ ಡೌಟು. ಯಾಕಂದ್ರೆ, ಹಿಂದೆ ಡೆಡ್ ಮ್ಯಾನ್ ಅಂಡರ್ ಟೇಕರ್ ಕೂಡ ಹೀಗೆ ಹೇಳಿಕೆ ನೀಡಿದ್ರು. ಕೆಲವೇ ದಿನಗಳಲ್ಲಿ ಮತ್ತೆ ಹಠಾತ್ ಎಂಟ್ರಿ ಕೊಟ್ಟು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ರು. ರೋಮನ್ ರೇನ್ಸ್ ಕೂಡ ಅಂಡರ್ ಟೇಕರ್ ಮಾಡಿರೋ ಗಿಮಿಕ್ ಅನ್ನೇ ಕಾಪಿ ಮಾಡ್ತಿದ್ದಾರಾ ಅನ್ನೋದು ಕೆಲವ್ರ ಪ್ರಶ್ನೆ. ಅದೇನೆ ಇರ್ಲಿ ರೋಮನ್ ರೇನ್ಸ್ ಆದಷ್ಟು ಬೇಗ ಗುಣಮುಖರಾಗಿ ರಸ್ಲಿಂಗ್ ಗೆ ಕಮ್ ಬ್ಯಾಕ್ ಮಾಡ್ಲಿ ಅನ್ನೋದು ಅಭಿಮಾನಿಗಳ ಆಶಯ.

-ಮೋಹನ್ ಕುಮಾರ್ ಎ ಯು ಎನ್.ಆರ್ ಪುರ

RELATED ARTICLES

Related Articles

TRENDING ARTICLES