Friday, March 29, 2024

ಬಿಗ್ ರೆಕಾರ್ಡ್ ಬ್ರೇಕ್ ಮಾಡಿದ ವಿರಾಟ್ ಕೊಹ್ಲಿ..!

ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ರನ್ ಗಳಿಸೋದು ಅಂದ್ರೆ ನೀರು ಕುಡಿದಷ್ಟು ಸುಲಭ. ಇವ್ರು ಬ್ಯಾಟಿಂಗ್ ಗೆ ಇಳಿದ್ರು ಅಂದ್ರೆ ಎದುರಾಳಿ ಬೌಲರ್ ಗಡಗಡ. ಒಂದೊಂದೇ ರೆಕಾರ್ಡ್ ಗಳನ್ನು ಬ್ರೇಕ್ ಮಾಡಿ, ತನ್ನ ಹೆಸರಿಗೆ ಆ ರೆಕಾರ್ಡ್ ಗಳನ್ನು ಬರೆಸಿಕೊಳ್ತಿರೋ ಕೊಹ್ಲಿ ಇದೀಗ ಮತ್ತೊಂದು ವರ್ಲ್ಡ್ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ಅದು ಅಂತಿಂಥಾ ರೆಕಾರ್ಡ್ ಅಲ್ಲ..! ಕ್ರಿಕೆಟ್ ದೇವ್ರು ಸಚಿನ್ ತೆಂಡೂಲ್ಕರ್ ಹೆಸ್ರಲ್ಲಿದ್ದ ವೇರಿ ವೇರಿ ಬಿಗ್ ರೆಕಾರ್ಡ್.
ಯಸ್, ವಿಶಾಖಪಟ್ಟಣದಲ್ಲಿ ನಡೆಯುತ್ತಿರೋ ವಿಂಡೀಸ್ ವಿರುದ್ಧದ 2ನೇ ಒನ್ ಡೇ ಮ್ಯಾಚ್ ನಲ್ಲಿ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವ್ರ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ.
ಅತ್ಯಂತ ವೇಗವಾಗಿ 10 ಸಾವಿರ ರನ್ ಪೂರೈಸಿದ ಬ್ಯಾಟ್ಸ್ ಮನ್ ಅನ್ನೋ ಕೀರ್ತಿಗೆ ಕ್ಯಾಪ್ಟನ್ ಕೊಹ್ಲಿ ಪಾತ್ರರಾಗಿದ್ದಾರೆ. ಸಚಿನ್ ತೆಂಡೂಲ್ಕರ್ 10 ಸಾವಿರ ರನ್ ಮಾಡೋಕೆ 259 ಇನ್ನಿಂಗ್ಸ್ ತಗೊಂಡಿದ್ರು. ಕೊಹ್ಲಿ ಕೇವಲ 205ನೇ ಇನ್ನಿಂಗ್ಸ್ ನಲ್ಲೇ ಈ ಮೈಲುಗಲ್ಲು ತಲುಪಿ ಸಚಿನ್ ರೆಕಾರ್ಡ್ ಪುಡಿಗಟ್ಟಿದ್ದಾರೆ.
ಈ ಮ್ಯಾಚ್ ಗೂ ಮುನ್ನ 204 ಇನ್ನಿಂಗ್ಸ್ ಗಳಿಂದ 9,919ರನ್ ಮಾಡಿದ್ದ ಕೊಹ್ಲಿಗೆ ಸಚಿನ್ ರೆಕಾರ್ಡ್ ಮುರಿಯಲು 81 ರನ್ ಬೇಕಿತ್ತು.

RELATED ARTICLES

Related Articles

TRENDING ARTICLES