2ನೇ ಒನ್ ಡೇ ವಾರ್ ನಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಗೆ 322 ರನ್ ಟಾರ್ಗೆಟ್ ನೀಡಿದೆ.
ವಿಶಾಖಪಟ್ಟಣದಲ್ಲಿ ನಡೆಯುತ್ತಿರೋ ಮ್ಯಾಚ್ ನಲ್ಲಿ ಟಾಸ್ ವಿನ್ ಆಗಿ ಫಸ್ಟ್ ಬ್ಯಾಟಿಂಗ್ ಮಾಡಿದ ಭಾರತ ನಿಗಧಿತ 50 ಓವರ್ ಗಳಲ್ಲಿ 6 ವಿಕೆಟ್ ಕಳ್ಕೊಂಡು 321 ರನ್ ಗಳಿಸಿದೆ.
ಎದುರಾಳಿ ವಿಂಡೀಸ್ ಗೆ ಈ ಬಿಗ್ ಟಾರ್ಗೆಟ್ ನೀಡುವಲ್ಲಿ ಪ್ರಮುಖ ಪಾತ್ರವಹಿಸಿರೋದು ಕ್ಯಾಪ್ಟನ್ ಕೊಹ್ಲಿ ಮತ್ತು ಅಂಬಟಿ ರಾಯ್ಡು. ಎದುರಾಳಿ ಟೀಮ್ ಯಾವ್ದೇ ಇರ್ಲಿ, ಬೌಲರ್ ಯಾರೇ ಆಗಿರ್ಲಿ ತನ್ನ ರನ್ ಗಳಿಕೆಗೆ ಕಡಿವಾಣ ಹಾಕೋಕೆ ಚಾನ್ಸೇ ಇಲ್ಲ ಅನ್ನುವಂತೆ ಇವತ್ತೂ ಕೂಡ ವಿರಾಟ್ ಬ್ಯಾಟ್ ಬೀಸಿದ್ರು. 129 ಬಾಲ್ ಗಳಲ್ಲಿ 4 ಸಿಕ್ಸರ್, 13 ಬೌಂಡರಿ ಮೂಲಕ ಕೊಹ್ಲಿ 157 ರನ್ ಗಳಿಸಿ ಔಟಾಗದೇ ಉಳಿದ್ರು. ಕ್ಯಾಪ್ಟನ್ ಗೆ ಸಾಥ್ ನೀಡಿದ ಅಂಬಟಿ ರಾಯ್ಡು 80 ಬಾಲ್ ಗಳಲ್ಲಿ 73 ರನ್ ಮಾಡಿ ಪೆವಿಲಿಯನ್ ಸೇರಿದ್ರು.
ಇನ್ನುಳಿದಂತೆ ರೋಹಿತ್ ಶರ್ಮಾ 4, ಶಿಖರ್ ಧವನ್ 29, ಧೋನಿ 20, ರಿಷಬ್ ಪಂತ್ 17, ಜಡೇಜ 13ರನ್ ಕೊಡುಗೆ ನೀಡಿದ್ರು. ವೆಸ್ಟ್ ಇಂಡೀಸ್ ಪರ ಆ್ಯಶ್ಲೆ ನರ್ಸ್, ಒಬೆಡ್ ಮೆಕ್ಕಾಯ್ ತಲಾ 2, ಮರ್ಲಾನ್ ಸ್ಯಾಮುಯಲ್ಸ್, ಕೆಮಾರ್ ರೂಚ್ ತಲಾ 1ವಿಕೆಟ್ ಪಡೆದಿದ್ದಾರೆ.
ಸಚಿನ್ ಗಿಂತ ಕೊಹ್ಲಿಯೇ ಬೆಸ್ಟ್ ಅಂತಿದೆ ಇವತ್ತು ಮಾಡಲಿರೋ ಈ ರೆಕಾರ್ಡ್..!
ಬಿಗ್ ರೆಕಾರ್ಡ್ ಬ್ರೇಕ್ ಮಾಡಿದ ವಿರಾಟ್ ಕೊಹ್ಲಿ..!