Friday, September 20, 2024

ಹಾಸ್ಪಿಟಲ್ ನಿಂದ ಡಿಸ್ಚಾರ್ಜ್ ಆದ ವಿಜಿ ಮಗಳು‌ ಕೊಟ್ಟ ಸ್ಟೇಟ್ಮೆಂಟ್ ಏನ್ ಗೊತ್ತಾ?

ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಫ್ಯಾಮಿಲಿ ವಾರ್ ಸದ್ಯಕ್ಕೆ ಬಗೆಹರಿಯಲ್ಲ ಅನ್ಸುತ್ತೆ.‌ ಅಪ್ಪ ವಿಜಯ್ ಮತ್ತು ಅವ್ರ 2ನೇ ಹೆಂಡ್ತಿ ಕೀರ್ತಿಗೌಡ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಗಿರಿನಗರ ಪೊಲೀಸ್ ಸ್ಟೇಷನ್ ನಲ್ಲಿ ಕಂಪ್ಲೇಂಟ್ ಕೊಟ್ಟು, ಬಳಿಕ ಹಾಸ್ಪಿಟಲ್ ಗೆ ಸೇರಿದ್ದ ಮೋನಿಕಾ ಈಗ ಡಿಸ್ಚಾರ್ಜ್ ಆಗಿದ್ದಾರೆ. ಹಾಸ್ಪಿಟಲ್ ನಿಂದ ಡಿಸ್ಚಾರ್ಜ್ ಆಗಿರೋ ಮೋನಿಕಾ ವಿಜಯ್ ವಿರುದ್ಧ ಮತ್ತೊಂದು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ನಿನ್ನೆ ನಾನು ಮನೆಯ ಕಿಟಕಿಗೆ ಕಲ್ಲಿಂದ ಹೊಡೆಯೋ ವೀಡಿಯೋವನ್ನು ಮೀಡಿಯಾಕ್ಕೆ ಕೊಟ್ಟಿದ್ರು. ಅದನ್ನು ನಾನು ನೋಡಿದೆ.‌ ಬಟ್ ಅದ್ರ ವಾಸ್ತವಾಂಶವೇ ಬೇರೆ. ನಂಗೆ ಹೊಡೆದು ಮನೆಯಿಂದ ಆಚೆ ದಬ್ಬಿದ ಮೇಲೆ ನಾನು ಕಿರುಚಾಡಿ ಕಿಟಕಿಗೆ ಕಲ್ಲಿಂದ ಹೊಡೆದೆ. ಮನೆಬಿಟ್ಟು 15 ದಿನ ಆಗಿತ್ತು. ನನ್ನ ಥಿಂಗ್ಸ್ ಗಳೆಲ್ಲಾ ಮನೇಲಿ ಇತ್ತು. ಆದ್ರಿಂದ ಅದನ್ನು ತೆಗೆದುಕೊಂಡು ಹೋಗಲು ಹೋಗಿದ್ದೆ. ಆಗ ನಂಗೆ ಅಮ್ಮನ ವಿರುದ್ಧ ಸ್ಟೇಟ್ಮೇಂಟ್ ನೀಡೋಕೆ ಒತ್ತಾಯ ಮಾಡಿದ್ರು. ಅದಕ್ಕೆ ನಾನು ಆಗಲ್ಲ ಅಂದಿದ್ದಕ್ಕೆ ಹಲ್ಲೆ ಮಾಡಿದ್ರು‌ . ನನ್ನ ತಂಗಿಗೂ ಹೊಡೆದಿದ್ದಾರೆ ಅಂತ ಮೋನಿಕಾ ವಿಜಯ್ ಮತ್ತು ಕೀರ್ತಿಗೌಡ ವಿರುದ್ಧ ಆರೋಪ ಮಾಡಿದ್ದಾರೆ.

RELATED ARTICLES

Related Articles

TRENDING ARTICLES