Friday, March 29, 2024

ಬೆಂಗಳೂರಿನ ಫುಟ್ ಪಾತ್ ನಲ್ಲಿ ಭರತನಾಟ್ಯ..!

ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸಿಟಿಜನ್ಸ್ ಫೋರಂ ಮೆಂಬರ್ ಗಳು ಫುಟ್ ಪಾತ್ ನಲ್ಲಿ ಭರತನಾಟ್ಯ ಮಾಡಿದ್ದಾರೆ. ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಭರತನಾಟ್ಯ ಮಾಡೋಕೆ ಯಾವ್ದೇ ಸ್ಟೇಜ್ ಸಿಗ್ದೆ ಸಿಟಿಜನ್ಸ್ ಫೋರಂ ಅವ್ರು ಫುಟ್ ಪಾತ್ ನಲ್ಲಿ ಹೆಜ್ಜೆ ಹಾಕಿದ್ದಲ್ಲ‌. ಇವ್ರು ಈ ರೀತಿ ಮಾಡಿದ್ದು ಖುಷಿಗಲ್ಲ, ಪ್ರದರ್ಶನಕ್ಕೂ ಅಲ್ಲ. ಇದು ಇವರು ನಡೆಸಿದ ವಿನೂತನ ರೀತಿಯ ಪ್ರತಿಭಟನೆ. ಬೆಂಗಳೂರಿನಲ್ಲಿ ಟ್ರಾಫಿಕ್ , ರಸ್ತೆ‌ ಗುಂಡಿ ಸಮಸ್ಯೆ , ಫುಟ್ ಪಾತ್ ಉಳಿವಿಗಾಗಿ ಈ ರೀತಿ ಪ್ರತಿಭಟನೆ ಮಾಡಿದ್ದಾರೆ. ‘ನಮ್ಗೆ ಭರತನಾಟ್ಯ ಬೇಡ ಫುಟ್ ಪಾತ್ ಬೇಕು ಅನ್ನೋ ಘೋಷವಾಕ್ಯ ಇಟ್ಕೊಂಡು ಮಲ್ಲೇಶ್ವರಂನ ನಂಜುಂಡಸ್ವಾಮಿ ಅವ್ರ ನೇತೃತ್ವದಲ್ಲಿ ಈ ಅಭಿಯಾನ ಶುರುವಾಗಿದೆ. ಡ್ಯಾನ್ಸರ್ ಅನುಸೂಯ ಬದ್ರಿನಾಥ್ ಮಲ್ಲೇಶ್ವರಂನಲ್ಲಿ ಹಾಳಾಗಿರೋ ಫುಟ್ ಪಾತ್ ನಲ್ಲಿ ಭರತನಾಟ್ಯ ಮಾಡೋ ಮೂಲಕ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.

 

RELATED ARTICLES

Related Articles

TRENDING ARTICLES