Friday, September 13, 2024

ರಿಯಾಲಿಟಿ ಸ್ಟಾರ್ ಕಿಟ್ಟಿ ಅರೆಸ್ಟ್..!

ಕನ್ನಡ ಬಿಗ್ ಬಾಸ್ ಸೀಸನ್ 3 ರ ಕಂಟೆಸ್ಟೆಂಟ್, ರಿಯಾಲಿಟಿ ಸ್ಟಾರ್ ಸುನಾಮಿ ಕಿಟ್ಟಿ ಅರೆಸ್ಟ್ ಆಗಿ, ಬೇಲ್ ಮೇಲೆ ಆಚೆ ಬಂದಿದ್ದಾರೆ. ಭಾನುವಾರ ಫ್ರೆಂಡ್ಸ್ ಜೊತೆ ಬೆಂಗಳೂರಿನ ಒರಾಯನ್ ಮಾಲ್ ನ ಹೈ ಲಾಂಜ್ ಪಬ್ ಗೆ ಹೋಗಿದ್ದ ಕಿಟ್ಟಿ ಸಪ್ಲೇಯರ್ ಮೇಲೆ ಹಲ್ಲೆ ಮಾಡಿದ್ರು. ಕಿಟ್ಟಿ ಸಿಂಗಲ್ ಸಿಗರೇಟ್ ಕೊಡುವಂತೆ ಕೇಳ್ದಾಗ ಸಪ್ಲೇಯರ್ ಸಿಂಗಲ್ ಬರಲ್ಲ, ಪ್ಯಾಕ್ ತಗೋಬೇಕು ಅಂದಿದ್ದೇ ಕಿಟ್ಟಿ ಸಿಟ್ಟಿಗೆ ಕಾರಣವಾಗಿತ್ತು. ‌ಕುಡಿದ ಮತ್ತಲ್ಲಿದ್ದ ಕಿಟ್ಟಿ ಸಪ್ಲೇಯರ್ ಮೇಲೆ ಹಲ್ಲೆ ನಡೆಸಿದ್ರು. ಕಿಟ್ಟಿಯ ಈ‌ ಪುಂಡಾಟದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇವತ್ತು ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡು ಕಿಟ್ಟಿಯನ್ನು ಅರೆಸ್ಟ್ ಮಾಡಿದ್ರು. ಆದ್ರೆ ಕೆಲವೇ ಕೆಲವು ನಿಮಷಗಳಲ್ಲಿ ಬೇಲ್ ಮೇಲೆ ಹೊರಬಂದಿದ್ದಾರೆ.‌ ಕಿಟ್ಟಿ ಈ ಹಿಂದೆಯೂ ಕಿರಿಕ್ ಮಾಡ್ಕೊಂಡು ಅರೆಸ್ಟ್ ಆಗಿದ್ದ ಎಕ್ಸಾಂಪಲ್ ಉಂಟು. ಫ್ರೆಂಡ್ ನ ಹೆಂಡ್ತಿಯ ಲವ್ವರ್ ನನ್ನು ಕಿಡ್ನಾಪ್ ಮಾಡಿ , ಹಲ್ಲೆ ನಡೆಸಿದ್ದ ಆರೋಪ ಕಿಟ್ಟಿ ವಿರುದ್ಧ ಕೇಳಿಬಂದಿತ್ತು. ಆಗ ಪೊಲೀಸ್ರು ಅರೆಸ್ಟ್ ಮಾಡಿ ವಾರ್ನಿಂಗ್ ಮಾಡಿ ಕಳುಹಿಸಿದ್ರು. ಆದ್ರೂ ಕಿಟ್ಟಿಗೆ ಬುದ್ಧಿ ಬಂದಂತಿಲ್ಲ.

RELATED ARTICLES

Related Articles

TRENDING ARTICLES