ಜಗತ್ತಲ್ಲಿ ನಾವು ಅದೆಷ್ಟೋ ವಿಚಿತ್ರ ಹಾಗೂ ವಿಶೇಷ ಹಾವುಗಳನ್ನು ನೋಡಿದ್ದೇವೆ. ಆದ್ರೆ, ಚಿಕ್ಕಮಗಳೂರಿನ ತೋಟವೊಂದ್ರಲ್ಲಿ ಕಾಣಿಸಿಕೊಂಡಿರೋ ಹಾವನ್ನು ಮಾತ್ರ ನೀವು ಗೂಗಲ್ ನಲ್ಲೂ ನೋಡಿಲ್ಲ. ಅವಿನಾಶ್ ಅನ್ನೋರ ತೋಟದಲ್ಲಿ ಕಾಣಿಸಿಕೊಂಡಿರೋ ಹಾವನ್ನು ಕಂಡ್ರೆ ಖಂಡಿತಾ ಬೆರಗಾಗ್ತೀರಿ..! ಇದು ಅಂತಿಂಥಾ ಹಾವಲ್ಲ ‘ಬೆಂಕಿ’ ಹಾವು..! ಹಾಗಾದ್ರೇ ಈ ಹಾವಿನ ವಿಶೇಷತೆ ಏನು ಅನ್ನೋ ಕುತೂಹಲವೇ? ಬೆಂಕಿ ಹಾವು ಅಂತ ಹೇಳಿದ್ರೆ ಈ ಹಾವಿನಲ್ಲಿ ಬೆಂಕಿ ಇಲ್ಲ.. ಹಾವಿಗೆ ಬೆಂಕಿಯೂ ತಾಗಿಲ್ಲ. ಸೂರ್ಯನ ಕಿರಣ ಹಾವಿನ ಹೆಡೆ ಮೇಲೆ ಬಿದ್ದು , ಬೆಂಕಿಯಂತೆ ಕಂಡಿದೆ. ಈ ಹಾವು ಮತ್ತು ನಾಯಿಯೊಂದಿಗೆ ಹೆಚ್ಚು ಕಮ್ಮಿ ಅರ್ಧಗಂಟೆ ಕಾದಾಡಿದೆ. ಈ ಕಾಳಗ ಕ್ಯಾಮರಾ ಕಣ್ಣಲ್ಲಿ ಸೆರೆಯಾದಾಗ ಈ ಅಪರೂಪದ ದೃಶ್ಯ ಕಂಡುಬಂದಿದೆ. ಈ ವೀಡಿಯೋ ಈಗ ವೈರಲ್ ಆಗ್ತಿದೆ.