Friday, March 29, 2024

ಶಬರಿಮಲೆಗೆ ಮಹಿಳಾ ಪ್ರವೇಶ ವಿಚಾರ ಮತ್ತೆ ಸುಪ್ರೀಂ ಅಂಗಳದಲ್ಲಿ..!

ಶಬರಿಮಲೆಗೆ ಮಹಿಳಾ ಪ್ರವೇಶ ವಿಚಾರ ಮತ್ತೆ ಸುಪ್ರೀಂ ಕೋರ್ಟ್ ಅಂಗಳಕ್ಕೆ ಬಂದಿದ್ದು, ಮತ್ತೆ ‘ಸುಪ್ರೀಂ’ ವಿಚಾರಣೆಗೆ ಒಪ್ಪಿದೆ.ಶಬರಿಮಲೆ ಅಯ್ಯಪ್ಪನ ಸನ್ನಿಧಿಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ತೀರ್ಪಿನ ಮರುವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು ಅಂದಿದೆ.
ಶಬರಿಮಲೆಗೆ ಮಹಿಳೆಯರ ಪ್ರವೇಶ ತೀರ್ಪು ಮರು ಪರಿಶೀಲನೆ ಮಾಡ್ಬೇಕು ಅಂತ ಕೋರಿ ಅಯ್ಯಪ್ಪ ಸ್ವಾಮಿ ಭಕ್ತರ ಒಕ್ಕೂಟ ಅರ್ಜಿಸಲ್ಲಿಸಿತ್ತು. ಸುಪ್ರೀಂಕೋರ್ಟ್ ಮರು ಪರಿಶೀಲನಾ ಅರ್ಜಿ ವಿಚಾರಣೆ ಅಂಗೀಕರಿಸಿದೆ. ನವೆಂಬರ್ 13 ರಂದು ಎಲ್ಲಾ ಅರ್ಜಿಗಳ ವಿಚಾರಣೆ ನಡೆಸೋದಾಗಿ ಸುಪ್ರೀಂಕೋರ್ಟ್ ನಿಂದ ಗ್ರೀನ್ ಸಿಗ್ನಲ್ ಬಂದಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೋಯ್ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ.  ಅಯ್ಯಪ್ಪ ಸ್ವಾಮಿ ಭಕ್ತರ ಒಕ್ಕೂಟದ ಪರ ವಕೀಲ ಮ್ಯಾಥ್ಯೂಸ್ ಜೆ.‌ನೆಡುಂವರ ಅರ್ಜಿ ಸಲ್ಲಿಸಿದ್ರು.
ಸಂವಿಧಾನ ಪೀಠ ನೀಡಿರೋ ತೀರ್ಪಿನ ಪರಿಶೀಲನೆ ಮಾಡುವಂತೆ‌ ಕೋರಿ 19 ಅರ್ಜಿಗಳು ಸಲ್ಲಿಕೆ ಆಗಿವೆ

RELATED ARTICLES

Related Articles

TRENDING ARTICLES