Friday, September 20, 2024

ರಾಕೇಶ್ ಅಸ್ಥಾನಾಗೆ ತಾತ್ಕಾಲಿಕ ರಿಲೀಫ್..!

ಸಿಬಿಐ ಸ್ಪೆಷಲ್ ಡೈರೆಕ್ಟರ್ ರಾಕೇಶ್ ಅಸ್ಥಾನಾಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಅಕ್ಟೋಬರ್ 29ರವರೆಗೂ ಅಸ್ಥಾನಾ ಅವ್ರನ್ನು ಬಂಧಿಸ್ಬೇಡಿ ಅಂತ ದೆಹಲಿ ಹೈಕೋರ್ಟ್ ಸಿಬಿಐಗೆ ಸೂಚನೆ ನೀಡಿದೆ.
ಭ್ರಷ್ಟಾಚಾರ ಆರೋಪದಡಿ ನಿನ್ನೆ ರಾಕೇಶ್ ಅಸ್ಥಾನಾ ಅವ್ರನ್ನು ಅರೆಸ್ಟ್ ಮಾಡಲಾಗಿತ್ತು. ತನ್ನ ಮೇಲೆ ಹಾಕಿರೋ ಎಫ್ ಐಆರ್ ರದ್ದುಪಡಿಸುವಂತೆ ಅಸ್ಥಾನಾ ದೆಹಲಿ ಕೋರ್ಟ್ ಮೊರೆ ಹೋಗಿದ್ರು. ಎಫ್ ಐಆರ್ ರದ್ದು ಕೋರಿ ಕೋರ್ಟ್ ಮೆಟ್ಟಿಲೇರಿದ್ದ ಅಸ್ಥಾನಾ ಅವ್ರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.‌
ಅಕ್ಟೋಬರ್ 29 ರವರೆಗೆ ಅರೆಸ್ಟ್ ಮಾಡದಂತೆ ದೆಹಲಿ ಕೋರ್ಟ್ ಹೇಳಿದೆ. ಅದೇ ದಿನ ಮಧ್ಯಾಹ್ನ 2 ಗಂಟೆ ಕೋರ್ಟ್ ಮರುವಿಚಾರಣೆ ಮಾಡಲಿದೆ

RELATED ARTICLES

Related Articles

TRENDING ARTICLES