ಪ್ರತಿಯೊಂದು ಪ್ರಾಣಿಗೂ ತನ್ನದೇ ಆದ ವಿಶೇಷ, ಅದ್ಭುತ ದೇಹ ರಚನೆ ಇದೆ. ಅದೇರೀತಿ ಗೂಬೆಯಲ್ಲೂ ವಿಶೇಷತೆ ಇದೆ. ಗೂಬೆಯ ಸ್ಪೆಶಾಲಿಟಿ ಬಗ್ಗೆ ಎಷ್ಟೋ ಜನರಿಗೆ ಗೊತ್ತೇ ಇಲ್ಲ!
ನೀವು-ನಾವು ತಲೇನಾ ನಮ್ ಭುಜದವರೆಗೆ ತಿರುಗಿಸ್ತೀವಿ. ಬೆನ್ನಿಗೆ ಮುಖ ತಿರುಗಿಸೋಕೆ ಹೋದ್ರೆ ಕುತ್ತಿಗೆ ಮುರಿದುಕೊಳ್ತೀವಿ! ಆದರೆ, ಗೂಬೆ ತನ್ನ ತಲೆಯನ್ನು ಹೇಗೆ ಬೇಕೋ ಹಾಗೆ ತಿರುಗಿಸಬಲ್ಲದು!
ಆಶ್ಚರ್ಯ ಆಗುತ್ತೆ ಅಲ್ವಾ? ಹೌದು , ಗೂಬೆ 360 ಡಿಗ್ರಿಯಲ್ಲಿ ತಲೆತಿರುಗಿಸ ಬಲ್ಲದು!
ಗೂಬೆಯ ದೇಹ ರಚನೆಯೇ ಹೀಗಿದೆ. ನರಗಳಿಗೆ ಯಾವ್ದೇ ರೀತಿಯ ತೊಂದರೆ ಆಗದಂತೆ , ರಕ್ತಸಂಚಾರಕ್ಕೆ ಸಮಸ್ಯೆ ಆಗದ ರೀತಿಯಲ್ಲಿ ಒಂದು ದಿಕ್ಕಿನಲ್ಲಿ ಕುಳಿತು ಯಾವ ದಿಕ್ಕಿನಲ್ಲಿ, ಯಾವ ಆ್ಯಂಗಲ್ ಗೆ ಬೇಕಾದರೂ ತಲೆ ತಿರುಗಿಸುವ ಶಕ್ತಿ ಗೂಬೆಗಿದೆ! ಇದರಿಂದ ಗೂಬೆ ತಾನು ಕೂತಲ್ಲೇ ಕೂತು ತನ್ನನ್ನು ಭೇಟೆಯಾಡಲು ಯಾರ್ ಬರ್ತಿದ್ದಾರೆ ಅಂತ ಗಮನಿಸಿ, ತನ್ನ ಭೇಟೆಗಾರರಿಂದ ತಪ್ಪಿಸಿಕೊಳ್ಳುತ್ತೆ.
ಗೂಬೆಗಿರುವ ಈ ಸ್ಪೆಶಾಲಿಟಿ ಪ್ರಪಂಚ ಬೇರೆ ಯಾವ ಪ್ರಾಣಿಗಳಿಗೂ ಇಲ್ಲ!