Saturday, June 22, 2024

ಚನ್ನಣ್ಣವರ್ ಮುಂದೆ ವಿಲನ್ ಡೈರೆಕ್ಟರ್..!

ದಿ ವಿಲನ್ ಮೂವಿ ಕಾಂಟ್ರವರ್ಸಿ ಈಗ ಪಶ್ಚಿಮ ವಲಯ ಡಿಸಿಪಿ ರವಿ ಡಿ ಚನ್ನಣ್ಣವರ್ ಮುಂದೆ ಬಂದು ನಿಂತಿದೆ.
ಡೈರೆಕ್ಟರ್ ಪ್ರೇಮ್ ತಮ್ಮ ಮೇಲೆ ಪರ್ಸನಲ್ ಅಟ್ಯಾಕ್ ಮಾಡ್ತಿರೋರ ವಿರುದ್ಧ ರವಿ ಡಿ ಚನ್ನಣ್ಣವರ್ ಅವರಲ್ಲಿ ಕಂಪ್ಲೇಂಟ್ ಕೊಟ್ಟಿದ್ದಾರೆ.


ಚನ್ನಣ್ಣವರ್ ಅವರನ್ನು ಭೇಟಿ ಮಾಡಿ ದೂರು ಕೊಟ್ಟ ಪ್ರೇಮ್, ” ವೈಯಕ್ತಿಕ ದಾಳಿ ಮಾಡ್ತಿರೋರ ಮೇಲೆ ಕಂಪ್ಲೇಂಟ್ ಕೊಟ್ಟಿದ್ದೀನಿ. ಸಿನಿಮಾ ಬಗ್ಗೆ ಮಾತಾಡೋಕೆ ಎಲ್ರಿಗೂ ರೈಟ್ಸ್ ಇದೆ. ಆದ್ರೆ, ಅದನ್ನು ಬಿಟ್ಟು ವೈಯಕ್ತಿಕ ದಾಳಿ ಮಾಡೋದು ತಪ್ಪು.‌ ಅಭಿಮಾನದ ಹೆಸ್ರಲ್ಲಿ ಬೇಡದ ಹೇಳಿಕೆಗಳನ್ನು ಕೊಟ್ಟು ಕೆಲವ್ರು ನನ್ ಹೆಸರು ಹಾಳು ಮಾಡೋಕೆ ಹೊರಟಿದ್ದಾರೆ. ಈ ಹೇಳಿಕೆಗಳ ಮೂಲಕ ಶಾಂತಿ ಕೆಡಿಸಿ ಕೋಮುಗಲಭೆಗೆ ಕಾರಣವಾಗುವ ಕಿಡಿಗೇಡಿಗಳ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹೂಡಿದ್ದೀನಿ. ನನ್ನ ಏಳ್ಗೆ ಸಹಿಸದವರು ಹೀಗೆ ಮಾಡ್ತಿದ್ದಾರೆ. ಬೇರೆಯವರ ಮೇಲೆ ವೈಯಕ್ತಿಕ ದಾಳಿ ಮಾಡೋರಿಗೆ ಇದು ಪಾಠವಾಗ್ಬೇಕು” ಅಂತ ಹೇಳಿದ್ದಾರೆ.

RELATED ARTICLES

Related Articles

TRENDING ARTICLES