Tuesday, October 15, 2024

ಪುರುಷರ ಪರ ನಿಂತ ಹರ್ಷಿಕಾ..! We Too ಗೆ ಕರೆಕೊಟ್ಟ ನಟಿ..!

#Me Too ನಂತೆ ಪುರುಷರ ಮೇಲೆ ಮಹಿಳೆಯರಿಂದ ಆಗ್ತಿರೋ ದೌರ್ಜನ್ಯದ ವಿರುದ್ಧ #Men Too ಶುರುಮಾಡ್ಬೇಕಿದೆ ಅಂತ ನಿನ್ನೆ ಪವರ್ ಟಿವಿ ಪ್ರಸ್ತಾಪ ಮಾಡಿತ್ತು. ನೀರಜ್ ಅನ್ನೋ ವ್ಯಕ್ತಿ ತನ್ನ ಹೆಂಡ್ತಿಯಿಂದ ಅನುಭವಿಸ್ತಿರೋ ಕಿರುಕುಳದ ಬಗ್ಗೆ ಹೇಳಿದ್ವಿ. ಇದೀಗ ಇದೇ ಆ್ಯಂಗಲ್ ನಲ್ಲಿ ನಟಿ ಹರ್ಷಿಕಾ ಪೂಣಚ್ಚ ಪುರುಷರ ಪರ ನಿಂತಿದ್ದಾರೆ. ನಟಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರೋ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ಪ್ರತಿಕ್ರಿಯಿಸಿರೋ ಹರ್ಷಿಕಾ #We Too ಗೆ ಕರೆಕೊಟ್ಟಿದ್ದಾರೆ. ಶ್ರುತಿ ಹೆಸರನ್ನು ಪ್ರಸ್ತಾಪ ಮಾಡದ ಹರ್ಷಿಕಾ ಇನ್ ಡೇರೆಕ್ಟ್ ಆಗಿ ಅವ್ರಿಗೆ ಟಾಂಗ್ ಕೊಟ್ಟಿದ್ದಾರೆ. ಮೀ‌ ಟೂ ಮೂಲಕ ನಟಿಯರು ಅಡ್ವಾಂಟೇಜ್ ತಗೋತ್ತಿದ್ದಾರೆ ಅಂದಿರೋ ಹರ್ಷಿಕಾ , ಪುರುಷರು #We Too ಆರಂಭಿಸ್ಬೇಕು ಅಂತ ಹೇಳಿದ್ದಾರೆ.

ಮಿ ಟೂ ಓಕೆ..ಮೆನ್ ಟೂ ಕೂಡ ಬೇಕು..! ಯಾರಿಗೇಳೋಣ ಹುಡುಗರ ಪ್ರಾಬ್ಲಮ್..?

https://www.facebook.com/actressHarshika/posts/2383223458360100?__tn__=K-R

RELATED ARTICLES

Related Articles

TRENDING ARTICLES