ರಾಜ್ಯದಲ್ಲಿ ಮೂರು ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್ ಕಾವು ದಿನದಿಂದ ದಿನಕ್ಕೆ ಏರ್ತಿದೆ. ಎಲೆಕ್ಷನ್ ಗೆ ದಿನಗಣನೆ ಶುರುವಾಗಿದ್ದು, ತಮ್ಮ ತಮ್ಮ ಪಕ್ಷದ ಕ್ಯಾಂಡಿಡೇಟ್ ಪರ ಪಕ್ಷದ ಮುಖಂಡರು ಬ್ಯಾಟಿಂಗ್ ಮಾಡ್ತಿದ್ದಾರೆ.
ಮಂಡ್ಯ , ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರ , ರಾಮನಗರ ಮತ್ತು ಜಮಖಂಡಿ ವಿಧಾಸಭಾ ಕ್ಷೇತ್ರಗಳ ಉಪಚುನಾವಣೆಗೆ ನವೆಂಬರ್ 3 ರಂದು ಮಹೂರ್ತ ನಿಗಧಿಯಾಗಿದೆ.
ಎಲೆಕ್ಷನ್ ಡೇಟ್ ತುಂಬಾ ಹತ್ತಿರದಲ್ಲಿ ಇರೋದ್ರಿಂದ ಭರದಿಂದ ಪ್ರಚಾರ ನಡೀತಾ ಇದೆ.
ಈ ನಡುವೆ ಉಪ ಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆ.
ಬಾಗಲಕೋಟೆಯ ಜಮಖಂಡಿ ಕ್ಷೇತ್ರದ ಬೈ ಎಲೆಕ್ಷನ್ ಪ್ರಚಾರದ ವೇಳೆ ಡಿಸಿಎಂ ಪರಮೇಶ್ವರ್ ಎಡವಟ್ಟು ಮಾಡ್ಕೊಂಡಿದ್ದಾರೆ.
ಕಾಂಗ್ರೆಸ್ ಕ್ಯಾಂಡಿಡೇಟ್ ಆನಂದ ನ್ಯಾಮಗೌಡ ಪರ ಬ್ಯಾಟಿಂಗ್ ಮಾಡುವ ಭರದಲ್ಲಿ ನೀತಿಸಂಹಿತೆ ಉಲ್ಲಂಘಿಸಿದ್ದಾರೆ.
“ಮೂರು ತಿಂಗಳ ಒಳಗಾಗಿ ಸಾವಳಗಿ-ಜಮಖಂಡಿ ಮಾರ್ಗದ ರಸ್ತೆ ಟಾರ್ ಹಾಕಿಸ್ತೀನಿ.ಇದು ನನ್ನ ಜವಬ್ದಾರಿ. ಆದ್ರೆ ಒಂದು ಕಂಡೀಷನ್, ನೀವು ಆನಂದ ನ್ಯಾಮಗೌಡ ಅವ್ರನ್ನು ಗೆಲ್ಲಿಸ್ಬೇಕು. ಇದು ಕಂಡೀಷನ್, ಸುಮ್ ಸುಮ್ನೆ ಚಪ್ಪಾಳೆ ಹೊಡೆದ್ರೆ ಆಗಲ್ಲ” ಅಂತ ಪರಮೇಶ್ವರವ್ರು ಹೇಳಿದ್ರು.
ಆಗ ನಿಮ್ಮವೇದಿಕೆ ಮೇಲಿದ್ದ ಮುಖಂಡ್ರು ಬಂದು ”ಸಾರ್ ನೀತಿ ಸಂಹಿತೆ ಉಲ್ಲಂಘನೆ ಆಗುತ್ತೆ” ಅಂತ ಕಿವಿಮಾತು ಹೇಳಿದ್ರೂ ಕೂಡ ಪರಂ ಕ್ಯಾರೇ ಅನ್ಲಿಲ್ಲ.
ಕ್ಯಾಂಡಿಡೇಟ್ ಪರ ಬ್ಯಾಟಿಂಗ್ ಮಾಡೋ ಭರದಲ್ಲಿ ಡಿಸಿಎಂ ನೀತಿಸಂಹಿತೆ ಉಲ್ಲಂಘನೆ..!
TRENDING ARTICLES