Tuesday, October 15, 2024

ಪಬ್ ನಲ್ಲಿ ಕಿರಿಕ್ ಮಾಡಿದ ಬಿಗ್ ಬಾಸ್ ಕಂಟೆಸ್ಟೆಂಟ್..! ಸಿಗರೇಟಿಗಾಗಿ ಸಿಟ್ಟಾದ ಕಿಟ್ಟಿ..!

ಕನ್ನಡ ಬಿಗ್ ಬಾಸ್ ಸೀಸನ್ 3 ನ ಕಂಟೆಸ್ಟೆಂಟ್ ಸುನಾಮಿ ಕಿಟ್ಟಿ ಪಬ್ ನಲ್ಲಿ‌ ಕಿರಿಕ್ ಮಾಡಿದ್ದಾರೆ. ಕುಡಿದ ಮತ್ತಲ್ಲಿ ಸಿಗರೇಟ್ ವಿಷ್ಯ ಇಟ್ಕೊಂಡು ರೆಸ್ಟೋರೆಂಟ್ ಸಿಬ್ಬಂದಿ ಮೇಲೆ‌ ಹಲ್ಲೆ ಮಾಡಿ‌ದ್ದಾರೆ.
ಭಾನುವಾರ ಫ್ರೆಂಡ್ಸ್ ಜೊತೆ ಬೆಂಗಳೂರಿನ ಒರಾಯನ್ ಮಾಲ್ ನ ಹೈ ಲಾಂಜ್ ಪಬ್ ಗೆ ಹೋಗಿದ್ದ ಕಿಟ್ಟಿ ಫುಲ್ ಟೈಟಾಗಿ ದಾಂಧಲೆ ನಡೆಸಿದ್ದಾರೆ.‌ ಸಿಂಗಲ್ ಸಿಗರೇಟ್ ಕೊಡು ಅಂತ ಸಪ್ಲೇಯರ್ ಹತ್ರ ಕಿಟ್ಟಿ ಕೇಳಿದ್ದಾರೆ. ಆದ್ರೆ ಸಪ್ಲೇಯರ್ ಸಿಂಗಲ್ ಬರಲ್ಲ ಸರ್ ಫುಲ್ ಪ್ಯಾಕ್ ತಗೋಬೇಕು ಅಂತ ಹೇಳಿದ್ದಾರೆ. ಇದ್ರಿಂದ ಸಿಟ್ಟಾದ ಕಿಟ್ಟಿ ಆ ಸಪ್ಲೇಯರ್ ಮೇಲೆ ಹಲ್ಲೆನಡೆಸಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ‌ಮೀಡಿಯಾದಲ್ಲಿ ಹರಿದಾಡ್ತಿದೆ. ಆರೋಪಿ ಕಿಟ್ಟಿಯನ್ನು ಅರೆಸ್ಟ್ ಮಾಡೋ ಸಾಧ್ಯತೆ ಇದೆ.

ತಲೆಗೆ ಏರಿತೇ ಸ್ಟಾರ್ ಗಿರಿ ? : ಸುನಾಮಿ ಕಿಟ್ಟಿ ಪುಂಡಾಟ ಇದೇ ಮೊದಲಲ್ಲ. ಈ ಹಿಂದೆಯೂ ಎಲ್ಲೆ ಮೀರಿ ವರ್ತಿಸಿದ ಎಕ್ಸಾಂಪಲ್ ಉಂಟು.
ಹಿಂದೆ ಫ್ರೆಂಡ್ ನ ಪತ್ನಿಯ ಲವ್ವರ್ ನನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದ ಆರೋಪ ಇವ್ರ ವಿರುದ್ಧ‌ ಕೇಳಿಬಂದಿತ್ತು. ಆಗ ಪೊಲೀಸ್ರು ಅರೆಸ್ಟ್ ಮಾಡಿ, ವಾರ್ನಿಂಗ್ ಮಾಡಿ ಕಳಿಸಿಕೊಟ್ಟಿದ್ರು.‌ಇಷ್ಟಾದ್ರು ಕಿಟ್ಟಿಗೆ ಬುದ್ಧಿ ಬರ್ಲಿಲ್ವೇ? ಅಥವಾ ಸ್ಟಾರ್ ಗಿರಿ ತಲೆಗೆ ಏರಿತೇ ಅನ್ನೋದು ಪ್ರಶ್ನೆ.‌ ಇದಕ್ಕೆ ಅವ್ರೇ ಉತ್ತರ ಕೊಡ್ಬೇಕು.

RELATED ARTICLES

Related Articles

TRENDING ARTICLES