Friday, July 19, 2024

ಟೀಂ ಇಂಡಿಯಾದ ಈ ಸ್ಟಾರ್ ಕ್ರಿಕೆಟರ್ 80 ವರ್ಷವಾದ್ರೂ ಈ ಟೀಂನಲ್ಲಿರ್ತಾರಂತೆ..!

ಅಮ್ಮಮ್ಮ ಅಂದ್ರೆ 35-40 ವರ್ಷದವರೆಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಆಡ್ಬಹುದು. ಆದ್ರೆ 80 ವರ್ಷ ವಯಸ್ಸಾದ್ಮೇಲೂ ಕ್ರಿಕೆಟ್ ಆಡೋದು ಅಂದ್ರೆ ಸಾಧ್ಯನೇ ಇಲ್ಲ ಅಲ್ವಾ? ಇದು ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಮಾತ್ರ ಅನ್ವಯಿಸಲ್ಲ..! ಯಾಕಂದ್ರೆ ಧೋನಿ 80 ವರ್ಷ ವಯಸ್ಸಾದ್ಮೇಲೂ ಈ ಟೀಂ ನಲ್ಲಿ ಆಡ್ತಾರಂತೆ..! ಯಾವ ಟೀಮ್ ನಲ್ಲಿ ಅಂದ್ರ? ಟೀಂ ಇಂಡಿಯಾದಲ್ಲಲ್ಲ ಸೌತ್ ಆಫ್ರಿಕಾದ ಮಾಜಿ ಕ್ರಿಕೆಟಿಗ ಎ.ಬಿ ಡಿವಿಲಿಯರ್ಸ್ ಟೀಂನಲ್ಲಿ..! ಯಸ್, ಹೀಗಂತ ಎಬಿಡಿಯೇ ಹೇಳಿದ್ದಾರೆ.‌ ಧೋನಿ ಬ್ಯಾಟ್ ಇತ್ತೀಚೆಗೆ ಸದ್ದು ಮಾಡ್ತಿಲ್ಲ. ‌ಧೋನಿ ಫಾರ್ಮ್ ಕಳ್ಕೊಂಡಿದ್ದಾರೆ. ಇದ್ರಿಂದಾಗಿ ಟೀಕೆಗೆ ಗುರಿ ಆಗ್ತಿದ್ದಾರೆ.

ಧೋನಿಯನ್ನು ಕೈಬಿಟ್ಟು ಯಂಗ್ ಪ್ಲೇಯರ್ಸ್ ಗೆ ಅವಕಾಶ ಕೊಡ್ಬಹುದು ಅನ್ನೋ ಮಾತು ಕೇಳಿಬರ್ತಿದೆ. ಧೋನಿ ಬಗ್ಗೆ ಟೀಕೆ ಮಾಡ್ತಿರೋರಿಗೆ ಎಬಿಡಿ ಮಾತಿನ ಏಟು ಕೊಟ್ಟಿದ್ದು ಹೀಗೆ. ಧೋನಿಗೆ 80 ವರ್ಷ ವಯಸ್ಸಾದ್ರೂ ಅವ್ರು ನನ್ನ ಟೀಂನ ಪರ್ಮನೆಂಟ್ ಮೆಂಬರ್ ಆಗಿರ್ತಾರೆ ಅಂದಿದ್ದಾರೆ ಎಬಿಡಿ. ಧೋನಿ 80ವರ್ಷ ವಯಸ್ಸಾಗಿ, ವೀಲ್ ಚೇರ್ ನಲ್ಲಿ ಇದ್ರೂ ಗೆಲುವಿಗಾಗಿ ಆಡ್ತಾರೆ.‌ಇಂಥಾ ಪ್ಲೇಯರನ್ನು ಟೀಂನಿಂದ ಕೈ ಬಿಡ್ತಾರ ಅಂತ ಎಬಿಡಿ ಧೋನಿ ಪರ ಬ್ಯಾಟಿಂಗ್ ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ 5 ಮ್ಯಾಚ್ ಗಳ ಒಡಿಐ ಟೂರ್ನಿಯಲ್ಲಿ ಇನ್ನೂ 4 ಮ್ಯಾಚ್ ಗಳು ಬಾಕಿ ಇವೆ.‌ ಧೋನಿ ಉತ್ತಮ ಆಟವಾಡಿ ಟೀಕೆ ಮಾಡ್ತಿರೋರ ಬಾಯಿ ಮುಚ್ಚಿಸ್ತಾರ ಅಂತ ಕಾದುನೋಡಬೇಕು

RELATED ARTICLES

Related Articles

TRENDING ARTICLES