Wednesday, September 18, 2024

ಶ್ರುತಿ ಹಿಂದಿದ್ದಾರೆ ಈ ಟಾಪ್ ನಟ..? ಅಷ್ಟಕ್ಕೂ ಆ ನಟಗೆ ಅರ್ಜುನ್ ಸರ್ಜಾ ಕಂಡ್ರೆ ಯಾಕಾಗಲ್ಲ?

ಸೌತ್ ಇಂಡಿಯಾದ ಪಾಪ್ಯುಲರ್ ಆ್ಯಕ್ಟರ್ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪ ಸ್ಯಾಂಡಲ್ ವುಡ್ ನಲ್ಲಿ ‘ಬಿರುಗಾಳಿ’ ಎಬ್ಬಿಸಿದೆ.
ಶ್ರುತಿ ಪರ ಒಂದಿಷ್ಟು ಜನ ಬ್ಯಾಟ್ ಬೀಸುತ್ತಿದ್ದರೆ, ಅರ್ಜುನ್ ಸರ್ಜಾ ಬೆನ್ನಿಗೆ ಒಂದಿಷ್ಟು ಜನ ಇದ್ದಾರೆ.
ಅರ್ಜುನಾ ಸರ್ಜಾ ಮಗಳು ನಟಿ ಐಶ್ವರ್ಯ ಕೂಡ ಶ್ರುತಿ ಹರಿಹರನ್ ಮೇಲೆ ಗರಂ ಆಗಿದ್ದಾರೆ.‌ ಶ್ರುತಿ ಪಬ್ಲಿಸಿಟಿಗಾಗಿ ಈ ರೀತಿ ಆರೋಪ‌ ಮಾಡ್ತಿದ್ದಾರೆ ಅಂತ ಹೇಳಿದ್ದ ಐಶ್ವರ್ಯ ಇವತ್ತು ಹೊಸ ಬಾಂಬ್ ಸಿಡಿಸಿದ್ದಾರೆ. ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಮಾಡಿರೋ ಆರೋಪದ ಹಿಂದೆ ಸ್ಯಾಂಡಲ್ ವುಡ್ ನ ಓರ್ವ ನಟನ ಕೈವಾಡವಿದೆ ಅಂತ ಐಶ್ವರ್ಯ ಹೇಳಿದ್ದಾರೆ.

ಆ ಸ್ಟಾರ್ ನಟ ಯಾರು? : ಶ್ರುತಿ ಆರೋಪದ ಹಿಂದೆ ನಟ ಮೈನಾ ಚೇತನ್ ಇದ್ದಾರೆ ಅನ್ನೋದು ಐಶ್ವರ್ಯ ಸಿಡಿಸಿರೋ ಹೊಸ ಬಾಂಬ್‌.
ಅರೇ ಮೈನಾ ಚೇತನ್..? ಶ್ರುತಿ ಮೂಲಕ ಮೈನಾ ಚೇತನ್ ಅರ್ಜುನ್ ಸರ್ಜಾ ವಿರುದ್ಧ ಇಂಥಾ ಆರೋಪ ಮಾಡಿಸೋರೋದು ಯಾಕೆ.‌ ಅರ್ಜುನ್ ಮೇಲೆ ಚೇತನ್ ಗೇಕೆ ಕೋಪ ಅನ್ನೋ ಪ್ರಶ್ನೆ ಹುಟ್ಟುತ್ತೆ.‌ ಇದಕ್ಕೂ ಐಶ್ವರ್ಯ ಸ್ಪಷ್ಟನೆ ಕೊಟ್ಟಿದ್ದಾರೆ.


ಐಶ್ವರ್ಯ ಮತ್ತು ಚಂದನ್ ನಟಿಸಿರೋ ‘ಪ್ರೇಮ ಬರಹ ‘ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಅರ್ಜುನ್ ಸರ್ಜಾ. ಇದು ಐಶ್ವರ್ಯ ಅವ್ರ ಡೆಬ್ಯುಟ್ ಮೂವಿ.

“ಈ ಮೂವಿಗೆ ಅಪ್ಪ (ಅರ್ಜುನ್ ಸರ್ಜಾ) ಚಂದನ್ ಗೂ‌ ಮುಂಚೆ ಮೈನಾ ಚೇತನ್ ಅವ್ರನ್ನು ಸೆಲೆಕ್ಟ್ ಮಾಡಿದ್ರು. ಹತ್ತು ಲಕ್ಷ ರೂ ಅಡ್ವಾನ್ಸ್ ಕೂಡ ಕೊಟ್ಟಿದ್ರು. ಆದ್ರೆ, ಕಾರಣಾಂತರದಿಂದ ಚೇತನ್ ಅವ್ರನ್ನು ಕೈ ಬಿಟ್ಟು, ಚಂದನ್ ಅವ್ರನ್ನು ಸೇರಿಸಿಕೊಂಡ್ರು. ಚೇತನ್ ನಿಂದ ಇಲ್ಲಿಯವರಿಗೂ ದುಡ್ಡು ವಾಪಸ್ಸು ಬರ್ಲಿಲ್ಲ. ಈಗ ಸಿನಿಮಾದಿಂದ ಕೈ ಬಿಟ್ಟಿದ್ದಕ್ಕಾಗಿ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಿದ್ದಾರೆ. ಶ್ರುತಿ ಹಿಂದೆ ಇರೋದು ಚೇತನ್” ಅಂತ ಐಶ್ವರ್ಯ ಆರೋಪಿಸಿದ್ದಾರೆ.‌

RELATED ARTICLES

Related Articles

TRENDING ARTICLES