ಬಾಲಿವುಡ್ ನಟಿ, ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ ನಟ ರಣವೀರ್ ಮದ್ವೆ ಇದೆ ನವೆಂಬರ್ ನಲ್ಲಿ ನಡೆಯಲಿದೆ.
ಅದಿರ್ಲಿ, ಈಗ ಎಷ್ಟೋ ಜನ ಮರ್ತಿರೋ, ಎಷ್ಟೋ ಜನರಿಗೆ ಗೊತ್ತೇ ಇಲ್ದೆ ಇರೋ ವಿಷ್ಯ ಅಂದ್ರೆ ದೀಪಿಕಾಳ ಎಕ್ಸ್ ಬಾಯ್ ಫ್ರೆಂಡ್ ಸಿದ್ಧಾರ್ಥ್ ಮಲ್ಯ ಸ್ಟೋರಿ.
ದೀಪಿಕಾ – ಸಿದ್ಧಾರ್ಥ್ ತಾವು ಲವ್ವರ್ ಅಂತ ಎಲ್ಲೂ ಹೇಳ್ಕೊಂಡಿರ್ಲಿಲ್ಲ. ಆದ್ರೆ, ತುಂಬಾ ಟೈಮ್ ಅಲ್ಲಲ್ಲಿ ಸಿಕ್ ಬಿದ್ದಿದ್ರು. ಸಿಕ್ಕಿ ಬಿದ್ದಾಗ, ನಾವು ಗುಡ್ ಫ್ರೆಂಡ್ಸ್ ಅಷ್ಟೇ ಅಂತ ಹೇಳ್ಕೋತ್ತಿದ್ರು. ಲವ್ ಗಿವ್ ಅಂತ ಮೀಡಿಯಾದಲ್ಲಿ ನ್ಯೂಸ್ ಆದ್ರೂ ತಲೆ ಕೆಡಿಸಿಕೊಂಡಿರ್ಲಿಲ್ಲ. ಮಲ್ಯ ಒಡೆತನದ ಸಾಕಷ್ಟು ಕಂಪನಿಗಳಿಗೆ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ರು.
ಜೊತೆ ಜೊತೆಯಲಿ ಇದ್ದ ದೀಪಿಕಾ-ಸಿದ್ಧಾರ್ಥ್ ಇದ್ದಕ್ಕಿದ್ದಂತೆ ದೂರ ಆದ್ರು.
ಒಂದು ಕಡೆ ದೀಪಿಕಾ ಸಾಲು ಹಿಟ್ ಸಿನಿಮಾಗಳಿಂದ ದೀಪಿಕಾ ಬಾಲಿವುಡ್ ನ ನಂಬರ್ 1 ನಟಿ ಆದ್ರು. ಇತ್ತ ಮಲ್ಯ ಒಡೆತನದ ಕಂಪನಿಗಳು ಲಾಸ್ ಆದ್ವು. ಕೇಸ್ ದಾಖಲಾಗ ತೊಡಗಿದ್ವು. ಆಗ ದೀಪಿಕಾ ತನ್ನ ಕೆರಿಯರ್ ಕಡೆ ಗಮಕೊಟ್ಟು, ಸಿದ್ಧಾರ್ಥ್ ಕಡೆಗಿನ ಗಮನ ಬಿಟ್ಟೇ ಬಿಟ್ರು. ಆಮೇಲೆ ಒಂದಿಷ್ಟು ಜನ ದೀಪಿಕಾ ಲೈಫ್ ನಲ್ಲಿ ಬಂದೋದ್ರು. ಸದ್ಯ ರಣವೀರ್ ಫಿಕ್ಸ್ ಆಗಿದ್ದಾರೆ.